ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಪಿಂಚಣಿ ಸವಲತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಶಾಸಕರ ಸವಲತ್ತುಗಳಿಗಾಗಿ ಜಗದೀಪ್ ಧನಕರ್ ಅರ್ಜಿ ಸಲ್ಲಿಸಿದ್ದಾರೆ. 1993ರಿಂದ 1998ರವರೆಗೆ ಕಿಶನ್ ಗಢ ಸ್ಥಾನದಿಂದ ಶಾಸಕರಾಗಿದ್ದ ಹಿನ್ನೆಲೆಯಲ್ಲಿ ರಾಜಸ್ಥಾನ ವಿಧಾನಸಭೆಯಲ್ಲಿ ಜಗದೀಪ್ ಧನಕರ್ ಅರ್ಜಿ ಸಲ್ಲಿಸಿದ್ದಾರೆ. ವಿಧಾನಸಭೆಯಲ್ಲಿ ಪಿಂಚಣಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಅನುಮೋದನೆ ಪ್ರಕ್ರಿಯೆ ಆರಂಭವಾಗಿದೆ.
ಮೂಲಗಳ ಪ್ರಕಾರ ಜಗದೀಪ್ ಧನಕರ್ 42 ಸಾವಿರ ರ್ ಪಿಂಚಣಿ ಪಡೆಯುತ್ತಾರೆ. ಇದರ ಜೊತೆಗೆ ಮಾಜಿ ಶಾಸಕರಿಗೆ ನೀಡಲಾಗುವ ಸೌಲಭ್ಯಗಳನ್ನು ಪಡೆಯಲಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯಪಾಲರಾಗುವ ಮೊದಲು ಜಗದೀಪ್ ಧನಕರ್ ರಾಜಸ್ಥಾನದ ಜುನ್ಜುನು ಕ್ಷೇತ್ರದಿಂದ ಲೋಕಸಭಾ ಸಂಸದರಾಗಿದ್ದರು. 2022ರಿಂದ 2025ರವರೆಗೆ ಬಿಜೆಪಿ ಅವರನ್ನು ಭಾರತದ ಉಪರಾಷ್ಟ್ರಪತಿಯನ್ನಾಗಿ ನೇಮಕ ಮಾಡಿತ್ತು. ಇದೀಗ ಜಗದೀಪ್ ಧನಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
You Might Also Like
TAGGED:ಜಗದೀಪ್ ಧನಕರ್