VIDEO | ಶಾರ್ಟ್ ಸರ್ಕ್ಯೂಟ್ ಬೆಂಕಿಯಿಂದ ಸಿಲಿಂಡರ್ ಸ್ಫೋಟ; ಇಡೀ ಮನೆ ಭಸ್ಮ

ಶಾರ್ಟ್ ಸರ್ಕ್ಯೂಟ್‌ನಿಂದ ಸಿಲಿಂಡರ್ ಸ್ಫೋಟಗೊಂಡ ನಂತರ ಮನೆಯೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ಈ ಅವಘಡ ಸಂಭವಿಸಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ಗಮನಿಸಿದ ತಕ್ಷಣ ಕುಟುಂಬ ಸದಸ್ಯರು ಪಾರಾಗಿದ್ದಾರೆ. ಬೆಂಕಿ ಹರಡಿದ ಪರಿಣಾಮ ಸಿಲಿಂಡರ್ ಒಡೆದಿರುವ ವಿಡಿಯೋ ಕೂಡ ಹೊರಬಿದ್ದಿದೆ.

ಲಾರ್ಡ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೋದಯ ನಗರದಲ್ಲಿ ಘಟನೆ ವರದಿಯಾಗಿದೆ. ಸುಮಾರು ಏಳು ಅಗ್ನಿಶಾಮಕ ದಳಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಘಟನೆಯಲ್ಲಿ ಇಡೀ ಮನೆ ಸುಟ್ಟು ಭಸ್ಮವಾಗಿದೆ.

ಹೆಚ್ಚುತ್ತಿರುವ ತಾಪಮಾನದಿಂದ ನಗರದಲ್ಲಿ ಬೆಂಕಿ ಅವಘಡಗಳೂ ಹೆಚ್ಚಿವೆ. ಸೋಮವಾರ ಮಧ್ಯಾಹ್ನ ಅಂತಹ ಮತ್ತೊಂದು ಘಟನೆಯಲ್ಲಿ, ದಾವಾ ಬಜಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯು ಅರ್ಧ ಡಜನ್‌ಗೂ ಹೆಚ್ಚು ಅಂಗಡಿಗಳು ಮತ್ತು ಗೋಡೌನ್‌ಗಳಿಗೆ ವ್ಯಾಪಿಸಿತು.

ಈ ಘಟನೆಯೂ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ ಬೆಂಕಿಯನ್ನು ನಂದಿಸಲು ಆರು ಅಗ್ನಿಶಾಮಕ ದಳಗಳು ಧಾವಿಸಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read