ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ರಾಂಬನ್ ಜಿಲ್ಲೆಯ ಮಹಿಳೆಯೊಬ್ಬರು ಬುಧವಾರ ಸುಂಬರ್ ನಿಂದ ಬನಿಹಾಲ್ ಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.
ಸುಂಬ್ಲರ್ ಗ್ರಾಮದ ಅಖ್ತಾರಾ ಬಾನೋ ಎಂದು ಗುರುತಿಸಲಾದ ಮಹಿಳೆ ಪ್ರಯಾಣದ ಮಧ್ಯದಲ್ಲಿ ಹೆರಿಗೆ ನೋವು ಅನುಭವಿಸಿದರು. ರೈಲ್ವೆ ರಕ್ಷಣಾ ಪೊಲೀಸ್ ತಂಡವು ಅವರಿಗೆ ಸಹಾಯ ಮಾಡಿದ್ದು, ಹೆರಿಗೆಯ ಸಮಯದಲ್ಲಿ ತಕ್ಷಣದ ಬೆಂಬಲ ನೀಡಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಹೇಳಲಾಗಿದೆ.
ಬನಿಹಾಲ್ ರೈಲು ನಿಲ್ದಾಣಕ್ಕೆ ಆಗಮಿಸಿದ ನಂತರ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು. ರಾಂಬನ್ ಜಿಲ್ಲೆಯ ಬನಿಹಾಲ್ ಬಳಿ 21 ವರ್ಷದ ಮಹಿಳೆಯೊಬ್ಬರು ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಂಬರ್ ಗ್ರಾಮದ ಮೂಲದ ಅಖ್ತೇರಾ ಬಾನೋ, ಅನಂತ್‌ನಾಗ್ ಜಿಲ್ಲೆಯ ಶೇರ್‌ಬಾಗ್‌ನಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಹೋಗಲು ತನ್ನ ಪತಿ ಮೊಹಮ್ಮದ್ ಅಶ್ರಫ್ ಅವರೊಂದಿಗೆ ಸಂಗಲ್ದನ್-ಬಾರಾಮುಲ್ಲಾ ರೈಲು ಹತ್ತಿದ್ದರು. ಆದರೆ, ರೈಲಿನಲ್ಲಿರುವಾಗಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಹ ಪ್ರಯಾಣಿಕಳಾದ ಸೂಲಗಿತ್ತಿಯೊಬ್ಬರು ಅಖ್ತೇರಾ ಅವರ ಮೊದಲ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.