ಈ ಸಮಯದಲ್ಲಿ ಮನೆ ಕಸ ತೆಗೆದು ಸ್ವಚ್ಛಗೊಳಿಸಿದ್ರೆ ಒಲಿಯಲಿದೆ ʼಅದೃಷ್ಟʼ

ವಾಸ್ತು ಶಾಸ್ತ್ರವನ್ನು ಅನೇಕರು ನಂಬುತ್ತಾರೆ. ಈಗ್ಲೂ ವಾಸ್ತು ನಿಯಮಗಳನ್ನು ಪಾಲಿಸುವವರಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರತಿ ದಿನ ಮನೆಯನ್ನು ಸ್ವಚ್ಛಗೊಳಿಸ್ತಾರೆ. ಆದ್ರೆ ಮನೆಯನ್ನು ಸಮಯವಲ್ಲದ ಸಮಯದಲ್ಲಿ ಸ್ವಚ್ಛಗೊಳಿಸುವುದು ಸರಿಯಲ್ಲ. ಮನೆಯಲ್ಲಿ ಕಸ ತೆಗೆಯಲು ಶುಭ ಸಮಯವಿದೆ ಎಂಬುದು ನಿಮಗೆ ಗೊತ್ತಾ?

ಸರಿಯಾದ ಸಮಯದಲ್ಲಿ ಕಸ ತೆಗೆದ್ರೆ ಶುಭ ಲಾಭ ಸಿಗುತ್ತದೆ. ಮನೆಗೆ ಲಕ್ಷ್ಮಿ ಆಗಮನವಾಗುತ್ತದೆ. ಮನೆಯಲ್ಲಿ ಹಣದ ಮಳೆಯಾಗುತ್ತದೆ. ಕಸ ತೆಗೆಯುವ ಶುಭ ಸಮಯ ಬೆಳಿಗ್ಗೆ 4ರಿಂದ 5 ಗಂಟೆ. ಮನೆ ಸ್ವಚ್ಛವಾಗಿದ್ದರೆ ಮಾತ್ರ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆ. ಸರಿಯಾದ ಸಮಯದಲ್ಲಿ ಕಸ ತೆಗೆದ್ರೆ ಅದೃಷ್ಟ ನಿಮ್ಮದಾಗುತ್ತದೆ.

ಮೊದಲ ಬಾರಿ ಮನೆ ಪ್ರವೇಶ ಮಾಡಿದವರು ಇದೇ ಸಮಯದಲ್ಲಿ ಕಸ ತೆಗೆಯುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ ಕಸ ಸ್ವಚ್ಛಗೊಳಿಸಿದ್ರೆ ಅದೃಷ್ಟ ಬದಲಾಗುತ್ತದೆ. ಆರ್ಥಿಕ ವೃದ್ಧಿ ಜೊತೆ ಸುಖ, ಶಾಂತಿ ನಿಮ್ಮದಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read