Shocking: ಇಸ್ಲಾಮಿಕ್ ಜನಸಂಖ್ಯೆ ಹೆಚ್ಚಳಕ್ಕೆ 13 ವರ್ಷದ ಹುಡುಗರೊಂದಿಗೆ ಸೆಕ್ಸ್; ವಯಾಗ್ರ ರೀತಿ ವಸ್ತು ನೀಡಿಕೆ

ಶಾಕಿಂಗ್ ಘಟನೆಯೊಂದರಲ್ಲಿ ಈಶಾನ್ಯ ಸಿರಿಯಾದ ಕ್ಯಾಂಪ್ ಅಲ್-ಹೌಲ್‌ನಲ್ಲಿ ಹದಿಹರೆಯದ ಹುಡುಗರು ಸಿರಿಯನ್ ಬಂಧನ ಶಿಬಿರಗಳಲ್ಲಿ ಇರಿಸಲಾದ ಡಜನ್ ಗಟ್ಟಲೆ ಐಸಿಸ್ ಮಹಿಳೆಯರೊಂದಿಗೆ ಬಲವಂತವಾಗಿ ಸಂಭೋಗಿಸಲು ಒತ್ತಾಯಿಸಲಾಗಿದೆ.

ಇಸ್ಲಾಮಿಕ್ ಜನಸಂಖ್ಯೆಯನ್ನು ಹೆಚ್ಚಿಸಲು ಮಹಿಳೆಯರು ಚಿಕ್ಕ ಹುಡುಗರನ್ನು ಬಲವಂತವಾಗಿ ಗರ್ಭ ಧರಿಸುವಂತೆ ಒತ್ತಾಯಿಸಿದ್ದಾರೆ. ಅವರಿಗೆ ವಯಾಗ್ರ ತರಹದ ವಸ್ತುವನ್ನು ನೀಡಿದ್ದಾರೆ. ಅಹ್ಮತ್(13), ಮತ್ತು ಹಮೀದ್(14) ಎಂಬ ಇಬ್ಬರು ಬಾಲಕರು ಶಿಬಿರದ ಸಿಬ್ಬಂದಿಯನ್ನು ಸಂಪರ್ಕಿಸಿದಾಗ ಈ ಘಟನೆಯು ಮುನ್ನೆಲೆಗೆ ಬಂದಿದೆ.

“ಐಸಿಸ್ ಮಹಿಳೆಯರು ಗರ್ಭ ಧರಿಸಲು ನಾವು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದೇವೆ. ನೀವು ನಮ್ಮನ್ನು ಇಲ್ಲಿಂದ ಹೊರಗೆ ಕರೆತರಬಹುದೇ?” ಎಂದು ಅವರು ಕೇಳಿಕೊಂಡಿದ್ದಾರೆ.

2019 ರಲ್ಲಿ ಐಸಿಸ್ ಅನ್ನು ಸೋಲಿಸಿದ ನಂತರ, ಸಿರಿಯನ್ ಸರ್ಕಾರವು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಸುಮಾರು 8,000 ಮಹಿಳೆಯರು ಮತ್ತು ಮಕ್ಕಳನ್ನು ಬಂಧಿಸಿದೆ. ವಯಸ್ಕ ಪುರುಷ ಐಸಿಸ್ ಭಯೋತ್ಪಾದಕರನ್ನು ಪ್ರತ್ಯೇಕ ಶಿಬಿರಗಳಲ್ಲಿ ಇರಿಸಲಾಗಿದೆ.

ಅಹ್ಮತ್ ಮತ್ತು ಹಮೀದ್ ಅವರು ಇತ್ತೀಚೆಗೆ ಸ್ಥಾಪಿಸಲಾದ ಓರ್ಕೇಶ್ ರಿಹ್ಯಾಬ್ ಸೌಲಭ್ಯದ ಸಿಬ್ಬಂದಿಗೆ ಹಲವಾರು ಐಸಿಸ್ ಮಹಿಳೆಯರಿಂದ ಲೈಂಗಿಕ ಶೋಷಣೆಗೆ ಬಲಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಕೇಂದ್ರದ ಕೆಲಸಗಾರರ ಪ್ರಕಾರ, ಒಬ್ಬ ಹುಡುಗನನ್ನು ಕೆಲವೇ ದಿನಗಳಲ್ಲಿ ಎಂಟು ಐಸಿಸ್ ಮಹಿಳೆಯರೊಂದಿಗೆ ಸೆಕ್ಸ್ ಗೆ ಒತ್ತಾಯಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಐಸಿಸ್ ಮಹಿಳೆಯರು ಹದಿಹರೆಯದವರಿಗೆ ಇಸ್ಲಾಮಿಕ್ ಸ್ಟೇಟ್‌ನ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಗರ್ಭಿಣಿಯಾಗಲು ಬಯಸಿದ್ದರು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read