ಶರೀರದಲ್ಲಿ ʼವಿಟಮಿನ್ ಡಿʼ ಕೊರತೆಯಾಗಿದ್ಯಾ…..? ಹೀಗೆ ಪತ್ತೆ ಮಾಡಿ

ನಮ್ಮ ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ. ದೇಹದಲ್ಲಿ ಇದ್ರ ಕೊರತೆಯಾದ್ರೆ ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಆಹಾರದ ಮೂಲಕವೂ ವಿಟಮಿನ್ ಡಿ ಪಡೆಯಬಹುದು. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿದೆ ಎಂಬುದನ್ನು ಕೆಲ ಲಕ್ಷಣಗಳಿಂದ ತಿಳಿಯಬಹುದು.

ಏಕಾಏಕಿ ನಿಮ್ಮ ತೂಕ ಹೆಚ್ಚಾಗುತ್ತಿದ್ದರೆ ವಿಟಮಿನ್ ಡಿ ಕೊರತೆಯೂ ಇದಕ್ಕೆ ಕಾರಣವಾಗಿರಬಹುದು. ವಿಟಮಿನ್ ಡಿ ನಮ್ಮ ದೇಹಕ್ಕೆ ನೈಟ್ರಿಕ್ ಆಕ್ಸೈಡ್ ನೀಡುತ್ತದೆ. ನೈಟ್ರಿಕ್ ಆಕ್ಸೈಡ್ ಒಂದು ಪ್ರಮುಖ ಪೋಷಕಾಂಶವಾಗಿದೆ. ಇದು ತೂಕವನ್ನು ನಿಯಂತ್ರಿಸುತ್ತದೆ.

ವಿಟಮಿನ್ ಡಿ ಕೊರತೆಯಿಂದ ಸುಸ್ತು ಕಾಡುತ್ತದೆ. ಸೂಕ್ತ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿ, ಸರಿಯಾಗಿ ನಿದ್ರೆ ಮಾಡಿದ್ರೂ ನಿಮಗೆ ಸುಸ್ತು ಕಾಡ್ತಿದ್ದರೆ  ವಿಟಮಿನ್ ಡಿ ಕೊರತೆಯಾಗಿದೆ ಎಂದರ್ಥ.

ವಿಟಮಿನ್ ಡಿ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಕಾರಣವಿಲ್ಲದೆ ನೋವು, ದುಃಖವಾಗ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ ಕೊರತೆಯಿದೆ ಎಂದರ್ಥ.

ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ, ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದಿಲ್ಲ. ಇದು ಮೂಳೆಗಳು ಮತ್ತು ಸ್ನಾಯುಗಳಲ್ಲಿ ಸಮಸ್ಯೆಗಳನ್ನುಂಟು ಮಾಡುತ್ತದೆ. ಬೆನ್ನು, ಸ್ನಾಯು ನೋವು ಕಾಣ್ತಿದ್ದರೆ ಅದು ಕೂಡ ವಿಟಮಿನ್ ಡಿ ಕೊರತೆ ಸಂಕೇತವಾಗಿದೆ.

ವಿಟಮಿನ್ ಡಿ ಕೊರತೆಯಿದ್ದರೆ ನಿಮಗೆ ಕೂದಲಿನ ಸಮಸ್ಯೆ ಕಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತದೆ. ವಿಟಮಿನ್ ಡಿ ಸಮಸ್ಯೆಯಿರುವವರು ಸೂರ್ಯನ ಬೆಳಕಿನಲ್ಲಿ ಮೈ ಒಡ್ಡಿ ನಿಲ್ಲಬೇಕು. ಪ್ರತಿ ದಿನ ಒಂದು ಗಂಟೆ ಅಥವಾ ಅರ್ಧ ಗಂಟೆ ಸೂರ್ಯನ ಬಿಸಿಲು ಮೈಗೆ ಬೀಳಬೇಕು. ಇದಲ್ಲದೆ. ಅಣಬೆಗಳು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಮೊಟ್ಟೆ ಸಾಕಷ್ಟು ವಿಟಮಿನ್ ಡಿ ಹೊಂದಿದೆ. ಹಸುವಿನ ಹಾಲು, ಸೋಯಾ ಹಾಲು, ಕಿತ್ತಳೆ ಜ್ಯೂಸ್ ಇವುಗಳಿಂದಲೂ ನೀವು ವಿಟಮಿನ್ ಡಿ ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read