ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಿ ಸಮಸ್ಯೆ ಕಾಡುತ್ತಿದೆಯಾ……? ಇಲ್ಲಿದೆ ಪರಿಹಾರ

ಯಾವುದೋ ಒಂದು ಆಹಾರವನ್ನು ಸೇವಿಸಿದ ಬಳಿಕ ಉಳಿದ ತ್ಯಾಜ್ಯ ಯೂರಿನ್ ಮುಖಾಂತರ ಹೊರಹೋಗದೆ  ದೇಹದಲ್ಲೇ ಉಳಿದುಬಿಡುತ್ತದೆ. ಆಗ ಕಿಡ್ನಿ ಸರಿಯಾಗಿ ಕೆಲಸ ಮಾಡದಾಗ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಯೂರಿಕ್ ಅಸಿಡ್ ದೇಹದಲ್ಲಿ ಸಂಗ್ರಹವಾಗಿ ದೇಹಕ್ಕೆ ಸಮಸ್ಯೆ ಉಂಟುಮಾಡುತ್ತದೆ.

ಆಗ ಬೆರಳುಗಳು ಮಡಚಿಕೊಂಡು ಗಂಟು ಗಂಟಿನ ಜಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಿದಾಗ ಹರಳುಗಳ ರೂಪದಲ್ಲಿ ಇದು ಸಂಗ್ರಹವಾಗುತ್ತದೆ. ಆಗ ಕೆಲವಷ್ಟು ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು.

ಹೂಕೋಸು, ಬೀನ್ಸ್, ಸೋಯಾ ಮೊದಲಾದವುಗಳಿಂದ ದೂರವಿರಿ. ಹಾಲು ಮೊಸರು, ಬೆಣ್ಣೆ, ತುಪ್ಪ ಮತ್ತು ಹಾಲಿನ ಉತ್ಪನ್ನಗಳನ್ನು ಹೇರಳವಾಗಿ ಸೇವಿಸಿ. ಇವುಗಳಿಂದ ದೇಹಕ್ಕೆ ಸಿಗುವ ಪ್ರೊಟೀನ್ ಅತ್ಯುತ್ತಮವಾದುದು. ಮೊಟ್ಟೆಯನ್ನೂ ಸೇವಿಸಬಹುದು. ನೆಲಕಡಲೆಯಿಂದ ದೂರವಿರಿ. ಕಾಳು ಪಲ್ಯದಿಂದ ದೂರವಿದ್ದಷ್ಟು ಒಳ್ಳೆಯದು.

ಸಕ್ಕರೆ ಬದಲಿಗೆ ಜೇನು ಬಳಸಿ. ಅಥವಾ ಸಕ್ಕರೆ ಹಾಕದ ಚಹಾ ಕಾಫಿ ಕುಡಿಯಿರಿ. ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಿ. ಡ್ರೈಫ್ರುಟ್ ಸೇವನೆ ಬಹಳ ಒಳ್ಳೆಯದು. ರಾತ್ರಿ ನೆನೆಸಿಟ್ಟ ಡ್ರೈಫ್ರುಟ್ ಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read