ಚೀನಾದಲ್ಲಿ ಹರಡುತ್ತಿರುವ ನಿಗೂಢ ‌ʼನ್ಯುಮೋನಿಯಾʼ ಮಕ್ಕಳಿಗೆಷ್ಟು ಅಪಾಯಕಾರಿ ? ಭಾರತದಲ್ಲೂ ಕಾಣಿಸಿಕೊಳ್ಳಲಿದೆಯೇ ಸೋಂಕು ? ಇಲ್ಲಿದೆ ಡಿಟೇಲ್ಸ್

ನ್ಯುಮೋನಿಯಾ ಗಂಭೀರವಾದ ಸಾಂಕ್ರಾಮಿಕ ಕಾಯಿಲೆ. ಇದು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರು, ಮಕ್ಕಳು, ವಯಸ್ಕರು ಅಥವಾ ವೃದ್ಧರು ಈ ರೋಗಕ್ಕೆ ಸುಲಭವಾಗಿ ಬಲಿಯಾಗುತ್ತಾರೆ.

ಕೆಮ್ಮು, ಶೀತ, ಜ್ವರ ಮತ್ತು ಎದೆಯಲ್ಲಿ ಕಫದ ಶೇಖರಣೆ ಇದಕ್ಕೆ ಕಾರಣ. ಇಂಥದ್ದೊಂದು ಅಪಾಯಕಾರಿಯಾದ ನಿಗೂಢ ನ್ಯುಮೋನಿಯಾ ಕಾಯಿಲೆ ಭಾರತದ ಪಕ್ಕದಲ್ಲಿರುವ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ. ಅದು ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ.

ತಜ್ಞರ ಪ್ರಕಾರ ಪ್ರಪಂಚದ ಯಾವುದೇ ಮೂಲೆಯಲ್ಲಿ ನ್ಯುಮೋನಿಯಾ ಸಂಭವಿಸಿದರೂ ಅದರ ಪರಿಣಾಮ ಜನರ ರೋಗ ನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಆರಂಭದಲ್ಲೇ ಸರಿಯಾದ ಚಿಕಿತ್ಸೆ ಲಭಿಸಿದರೆ ರೋಗಿ ಗುಣಮುಖನಾಗುತ್ತಾನೆ.

ನ್ಯುಮೋನಿಯಾದ ವಿಧಗಳು

ಕಮ್ಯೂನಿಟಿ ಅಕ್ವಾಯರ್ಡ್‌ ನ್ಯುಮೋನಿಯಾ – ವ್ಯಕ್ತಿಯು ಆಸ್ಪತ್ರೆಗೆ ಹೋಗದಿದ್ದಾಗ ಈ ರೀತಿಯ ನ್ಯುಮೋನಿಯಾ ಸಂಭವಿಸುತ್ತದೆ.

ಬ್ಯಾಕ್ಟೀರಿಯಾ – ನ್ಯುಮೋನಿಯಾಕ್ಕೆ ಕಾರಣ ಸ್ಟ್ರೆಪ್ಟೋಕೊಕಸ್. ಇದು ಲೋಬರ್ ನ್ಯುಮೋನಿಯಾ ಆಗಿರಬಹುದು. ಜ್ವರದ ನಂತರ ಶ್ವಾಸಕೋಶಕ್ಕೆ ಸೋಂಕು ತರುತ್ತದೆ.

ಎಟಿಪಿಕಲ್ ನ್ಯುಮೋನಿಯಾ- ಇದು ಅತ್ಯಂತ ವಿಭಿನ್ನ ಮತ್ತು ವಿಲಕ್ಷಣವಾಗಿರುತ್ತದೆ. ಎಲ್ಲಾ ವಯಸ್ಸಿನ ಜನರಿಗೆ ಸಂಭವಿಸಬಹುದು. ಇದು ಮೈಕೋಪ್ಲಾಸ್ಮಾ ಅಥವಾ ಕ್ಲಮೈಡಿಯ ಜೀವಿಗಳಿಂದ ಉಂಟಾಗುತ್ತದೆ.

ಫಂಗಲ್ ನ್ಯುಮೋನಿಯಾ – ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವವರು ಇದಕ್ಕೆ ತುತ್ತಾಗುತ್ತಾರೆ.

COVID-19 ನಂತಹ ವೈರಸ್‌ಗಳು – ಶೀತ ಮತ್ತು ಜ್ವರದಿಂದ ಉಂಟಾಗುವ ನ್ಯುಮೋನಿಯಾ. ಇದು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ.

ನೊಸೊಕೊಮಿಯಲ್ ನ್ಯುಮೋನಿಯಾ – ಇದು ಆಸ್ಪತ್ರೆಗಳಲ್ಲಿ ಸಂಭವಿಸುತ್ತದೆ. ಹಾಸ್ಪಿಟಲ್‌ ಅಕ್ವಾಯರ್ಡ್‌ (HAP) ಮತ್ತು ವೆಂಟಿಲೇಟರ್ ಅಕ್ವಾಯರ್ಡ್‌ ನ್ಯುಮೋನಿಯಾ (VAP)ಇದರಲ್ಲಿ  ಸೇರಿವೆ.

ಅಸ್ಪಿರೇಶನ್‌ ನ್ಯುಮೋನಿಯಾ – ಇದು ವಾಂತಿ, ಕಫ ಮತ್ತು ಶ್ವಾಸಕೋಶದಲ್ಲಿ ಸೋಂಕನ್ನು ಉಂಟುಮಾಡುತ್ತದೆ.

ಪರಿಸರದಲ್ಲಿ ಮಾಲಿನ್ಯ ಸೇರಿದಂತೆ ವಿವಿಧ ರೀತಿಯ ಬ್ಯಾಕ್ಟೀರಿಯಾಗಳಿಂದ ನ್ಯುಮೋನಿಯಾ ಉಂಟಾಗುತ್ತದೆ. ಅದಕ್ಕೆ ಔಷಧಿಗಳ ಜೊತೆಗೆ ಕೆಲವು ಮನೆಮದ್ದುಗಳು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಉಸಿರಾಟದ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಜ್ವರ, ವಿಪರೀತ ಕೆಮ್ಮು, ಎದೆ ನೋವು ಇತ್ಯಾದಿಗಳು ಕೂಡ ರೋಗ ಲಕ್ಷಣಗಳಾಗಿರುತ್ತವೆ.

ಉತ್ತರ ಭಾರತದಲ್ಲಿ ಚಳಿಗಾಲವು ಈಗಷ್ಟೇ ಪ್ರಾರಂಭವಾಗಿದೆ. ಪ್ರಪಂಚದಾದ್ಯಂತ ಚಳಿಗಾಲದಲ್ಲಿ ಇಂತಹ ಕಾಯಿಲೆಗಳು ಹೆಚ್ಚಾಗುತ್ತವೆ. ಹಾಗಾಗಿ ಚೀನಾದಲ್ಲಿ ಹಬ್ಬಿರುವ ನಿಗೂಢ ನ್ಯುಮೋನಿಯಾ ಬಗ್ಗೆ ಅಲರ್ಟ್‌ ಆಗಿರುವುದು ಉತ್ತಮ ಎನ್ನುತ್ತಾರೆ ತಜ್ಞ ವೈದ್ಯರು. ಅವುಗಳ ಬಗ್ಗೆ ಭಯಪಡುವ ಮೊದಲು ವೈಜ್ಞಾನಿಕವಾಗಿ ಬಹಳ ಸ್ಪಷ್ಟವಾಗಿರಬೇಕು ಅನ್ನೋದು ಅವರ ಸಲಹೆ.

ಚೀನಾದಲ್ಲಿ ವೇಗವಾಗಿ ಹರಡುತ್ತಿರುವ ನ್ಯುಮೋನಿಯಾ ಮಕ್ಕಳನ್ನು ಹೆಚ್ಚು ಬಲಿಪಶುಗಳನ್ನಾಗಿ ಮಾಡುತ್ತಿದೆ. ಅದರ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ನಿಗೂಢ ನ್ಯುಮೋನಿಯಾ ಚೀನಾದ ಬೀಜಿಂಗ್, ಲಿಯಾನಿಂಗ್‌ನಲ್ಲಿ ಆತಂಕ ಸೃಷ್ಟಿಸಿದೆ. ಎಲ್ಲಾ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದು ಮಾತ್ರವಲ್ಲದೆ ಶಿಕ್ಷಕರಿಗೂ ನ್ಯುಮೋನಿಯಾ ಸೋಂಕು ತಗುಲಿದೆ.

ವಿಶ್ವ ಆರೋಗ್ಯ ಸಂಸ್ಥೆ ಈ ನಿಗೂಢ ಕಾಯಿಲೆಯ ಬಗ್ಗೆ ವಿವರವಾದ ಮಾಹಿತಿಯನ್ನು ಕೇಳಿದೆ. ವಿಪರೀತ ಜ್ವರ ಸೇರಿದಂತೆ ರೋಗ ಲಕ್ಷಣಗಳು ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತಿವೆ. ಕೆಲವು ಮಕ್ಕಳಲ್ಲಿ ಪಲ್ಮನರಿ ಗಂಟುಗಳು ಬೆಳೆಯುತ್ತಿವೆ. ಸಾಮಾನ್ಯವಾಗಿ “ವಾಕಿಂಗ್ ನ್ಯುಮೋನಿಯಾ” ಎಂದು ಕರೆಯಲ್ಪಡುವ ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಈ ಕಾಯಿಲೆ ಏಕಾಏಕಿ ಉಂಟಾಗಬಹುದು ಎಂದು ಊಹಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read