ಮಕ್ಕಳಾದ್ಮೇಲೆ ಸಂಬಂಧ ಬೆಳೆಸೋದು ಕಷ್ಟವಾಗ್ತಿದೆಯಾ…..?

ಮಕ್ಕಳಾದ್ಮೇಲೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ದಂಪತಿ ಭಾವನಾತ್ಮಕವಾಗಿ ಹತ್ತಿರವಾಗಿರ್ತಾರೆ. ಆದ್ರೆ ದೈಹಿಕ ಸಂತೋಷದಲ್ಲಿ ಕೊರತೆ ಕಾಣುತ್ತದೆ. ನಮ್ಮಿಬ್ಬರ ಪ್ರೀತಿ ಮಕ್ಕಳ ಮೇಲೆ ಪ್ರಭಾವ ಬೀರಿದ್ರೆ ಎಂಬ ಭಯ ಕಾಡ್ತಾ ಇರುತ್ತದೆ. ಜೊತೆಗೆ ಮಕ್ಕಳ ಲಾಲನೆ-ಪಾಲನೆಯಲ್ಲಿಯೇ ಮಹಿಳೆಯರು ಸಮಯ ಕಳೆಯುವುದರಿಂದ ಪತಿಗಾಗಿ ಸಮಯ ಸಿಗೋದೇ ಇಲ್ಲ. ನಿಮ್ಮೆಲ್ಲ ಸಮಯವನ್ನು ಮಕ್ಕಳಿಗಾಗಿಯೇ ಮೀಸಲಾಗಿಡಬೇಕೆಂದೇನೂ ಇಲ್ಲ. ಮಕ್ಕಳ ಜೊತೆಗೆ ಸಂಗಾತಿಗೂ ಸಮಯ ಹೊಂದಿಸಿಕೊಳ್ಳಿ.

ಮಗು ಪಕ್ಕದಲ್ಲಿಯೇ ಮಲಗಿದ್ದಾಗ ಪತಿ-ಪತ್ನಿಗೆ ಭಯವಿರುತ್ತದೆ. ನಮ್ಮಿಂದ ಮಗು ಎಚ್ಚರಗೊಂಡ್ರೆ ಎಂಬ ಆತಂಕ ಕಾಡುತ್ತಿರುತ್ತದೆ. ಆದ್ರೆ ಮಗು 4-5 ತಿಂಗಳಾದ್ಮೇಲೆ ಅದ್ರ ಹತ್ತಿರವೇ ಮಲಗಬೇಕೆಂದೇನೂ ಇಲ್ಲ. ಮಗು ನಿದ್ರೆ ಮಾಡಿದ ಮೇಲೆ ನೀವು ನಿಮ್ಮ ಸಂಗಾತಿ ಜೊತೆ ಮಗು ಮಲಗಿದ ಸ್ವಲ್ಪ ದೂರದಲ್ಲಿ ಮಲಗಬಹುದು.

ಸಾಮಾನ್ಯವಾಗಿ ಆರೋಗ್ಯ ಸರಿಯಿಲ್ಲದ ವೇಳೆ ಬಿಟ್ಟರೆ ಹಸಿವಾದಾಗ ಮಾತ್ರ ಮಕ್ಕಳು ಅಳುತ್ವೆ. ಹಾಗಾಗಿ ಮಕ್ಕಳಿಗೆ ಸರಿಯಾಗಿ ಆಹಾರ ತಿನ್ನಿಸಿ. ಹಾಲು ಕುಡಿಸಿ ಆಟದ ಸಾಮಗ್ರಿಗಳನ್ನು ನೀಡಿ. ಅವು ಆಟವಾಡ್ತಿರುವ ವೇಳೆ ನೀವು ಬೇರೆ ರೂಮಿನಲ್ಲಿ ಸಂಗಾತಿ ಜೊತೆ ಸಮಯ ಕಳೆಯಬಹುದು.

ಆದಷ್ಟು ಮಕ್ಕಳು ಬೇಗ ಮಲಗುವಂತೆ ನೋಡಿಕೊಳ್ಳಿ. ಮಕ್ಕಳು ಮಲಗುವುದು ಲೇಟಾದ್ರೆ ನಿಮ್ಮ ಸುಸ್ತೂ ಹೆಚ್ಚಾಗುತ್ತದೆ. ಜೊತೆಗೆ ಸಂಗಾತಿ ಮೂಡ್ ಹಾಳಾಗುತ್ತದೆ. ಹಾಗಾಗಿ ದಿನವಿಡಿ ಮಕ್ಕಳನ್ನು ಆಡಿಸಿ, ಅವ್ರ ಜೊತೆ ಹೆಚ್ಚಿನ ಸಮಯ ಕಳೆಯಿರಿ. ರಾತ್ರಿ ಬೇಗ ಮಕ್ಕಳನ್ನು ಮಲಗಿಸಿ.

ನಿಮ್ಮ ಸಂಗಾತಿ ಜೊತೆ ಹೊರಗೆ ಹೋಗಿ ಬನ್ನಿ. ಮಗುವಿಗೆ ತಾತ-ಅಜ್ಜಿ ಇದ್ದರೆ ಅವರ ಜೊತೆ ಮಗುವನ್ನು ಕೆಲ ಸಮಯ ಬಿಟ್ಟು ಹೋಗಿ. ನಿಮ್ಮ ಮಗುವನ್ನು ಅಜ್ಜಿ-ತಾತ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಭಯ ಬೇಡ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read