ಊಟದ ಮಧ್ಯೆ ವಿಪರೀತ ಬಾಯಾರಿಕೆ ಕ್ಯಾನ್ಸರ್‌ ಲಕ್ಷಣವೇ…..?

ಕೆಲವರಿಗೆ ಊಟದ ಮಧ್ಯೆ ಲೀಟರ್‌ಗಟ್ಟಲೆ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಊಟದ ಸಂದರ್ಭದಲ್ಲಿ ಇಷ್ಟೊಂದು ಬಾಯಾರಿಕೆ ಸಹಜವೇ ಎಂಬ ಪ್ರಶ್ನೆ ಕಾಡಬಹುದು. ಈ ರೀತಿಯ ಲಕ್ಷಣಗಳು ಕ್ಯಾನ್ಸರ್‌ನಂತಹ ಮಾರಕ ರೋಗಗಳ ಸಂಕೇತವೆಂದೂ ಹೇಳಲಾಗುತ್ತದೆ. ಆದರೆ ಇದು ಎಷ್ಟು ಸತ್ಯ ಎಂಬುದನ್ನು ನೋಡೋಣ.

ಊಟ ಮಾಡುವಾಗ ನೀರು ಕುಡಿಯುವುದು ಕ್ಯಾನ್ಸರ್‌ನ ಸಂಕೇತ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವವಾಗಿ ಆಹಾರ ತಿನ್ನುವಾಗ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟ ಮಾಡುವಾಗ ಸ್ವಲ್ಪ ನೀರು ಕುಡಿಯುವುದರಿಂದ ಗ್ಯಾಸ್‌ ಸಮಸ್ಯೆ ಸಹ ಆಗುವುದಿಲ್ಲ. ಜೊತೆಗೆ ಸಂಪೂರ್ಣ ತೃಪ್ತಿಯನ್ನು ಅನುಭವಿಸಬಹುದು.

ಆದರೆ ಆಹಾರವನ್ನು ತಿನ್ನುವ ಅರ್ಧಗಂಟೆ ಮೊದಲು ನೀರು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಈ ಮೂಲಕ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ನೀರು ಕುಡಿಯುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಏಕೆಂದರೆ ದೇಹದ ಎಲ್ಲಾ ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀರಿನ ಅಗತ್ಯವಿದೆ.

ಹಾಗಂತ ನೀರನ್ನು ಅತಿಯಾಗಿ ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಓವರ್‌ ಹೈಡ್ರೇಶನ್‌ ಉಂಟಾಗುತ್ತದೆ. ಇದರಿಂದ ಜೀವಕೋಶಗಳು ಊದಿಕೊಳ್ಳುತ್ತವೆ. ಮೆದುಳಿನ ಜೀವಕೋಶಗಳು ಉಬ್ಬಿದಾಗ ಅವು ಮೆದುಳಿನಲ್ಲಿ ಒತ್ತಡವನ್ನು ಉಂಟುಮಾಡುತ್ತವೆ. ಇದರಿಂದಾಗಿ ಗೊಂದಲ, ನಿದ್ರೆಯ ಕೊರತೆ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಎದುರಿಸಬಹುದು. ಒಟ್ಟಾರೆಯಾಗಿ ನೀರಿನ ಸೇವನೆ ಕೂಡ ನಮ್ಮ ದೇಹದ ಅಗತ್ಯಕ್ಕೆ ತಕ್ಕಂತಿರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read