BREAKING: ಇರಾನ್- ಇಸ್ರೇಲ್ ಯುದ್ಧ ಹಿನ್ನೆಲೆ: ಇಸ್ರ‍ೇಲ್ ನಲ್ಲಿ ಸಿಲುಕಿರುವ ಕರ್ನಾಟಕದ ನಿಯೋಗ

ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ಆರಂಭವಾಗಿದ್ದು, ಇಸ್ರೇಲ್ ನಲ್ಲಿ ಕರ್ನಾಟಕದ 19 ಜನರ ನಿಯೋಗ ಸಿಲುಕಿಕೊಂಡಿದೆ.

ಅಧ್ಯಯನಕ್ಕಾಗಿ ಇಸ್ರೇಲ್ ಗೆ ಹೋಗಿದ್ದ ಕರ್ನಾಟಕದ ನಿಯೋಗ, ವಿಮಾನ ಸಂಚಾರವನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿಯೇ ಸಿಲುಕಿಕೊಂಡಿದ್ದು, ಭಾರತಕ್ಕೆ ಮರಳಲು ಪರದಾಟ ನಡೆಸಿದ್ದಾರೆ.

ಬಿಪ್ಯಾಕ್ ಸಂಸ್ಥೆಯ ಮೂಲಕ ಅಧ್ಯಯನಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರನ್ನೊಳಗೊಂಡ 19 ಜನರ ನಿಯೋಗ ಇಸ್ರೇಲ್ ಗೆ ತೆರಳಿತ್ತು. ಇರಾನ್- ಇಸ್ರೇಲ್ ನಡುವೆ ಯುದ್ಧ ಶುರುವಾಗಿರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕರ್ನಾಟಕದ ನಿಯೋಗ ಇಸ್ರೇಲ್ ನಲ್ಲಿಯೇ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read