BREAKING: ಇರಾನ್ ಬಂದರಿನಲ್ಲಿ ಭಾರೀ ಸ್ಪೋಟ, ಬೆಂಕಿ: 500ಕ್ಕೂ ಅಧಿಕ ಮಂದಿ ಗಾಯ: ಹಲವರು ಸಾವಿನ ಶಂಕೆ | Iran Blast

ಇರಾನಿನ ಬಂದರು ನಗರ ಬಂದರ್ ಅಬ್ಬಾಸ್ ನಲ್ಲಿ ಭಾರಿ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡ ನಂತರ ಸುಮಾರು 516 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಮೂರನೇ ಸುತ್ತಿನ ಪರಮಾಣು ಮಾತುಕತೆ ಒಮಾನ್‌ನಲ್ಲಿ ನಡೆಯುತ್ತಿರುವ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವನ್ನು ತಕ್ಷಣವೇ ತಿಳಿದುಬಂದಿಲ್ಲ.

ಬಂದರ್ ಅಬ್ಬಾಸ್ ನಗರದ ಶಾಹಿದ್ ರಾಜಿ ಬಂದರಿನಲ್ಲಿ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಬಂದರು ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಯುತ್ತಿವೆ. ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಹಲವಾರು ಕಿಲೋಮೀಟರ್‌ ಗಳ ದೂರದವರೆಗಿನ ಕಟ್ಟಡಗಳ ಕಿಟಕಿಗಳು ಮುರಿದುಹೋಗಿವೆ.

ಸಿನಾ ಕಂಟೇನರ್ ಯಾರ್ಡ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತೈಲ ಮತ್ತು ಪೆಟ್ರೋಕೆಮಿಕಲ್ ಸೌಲಭ್ಯಗಳ ಕಂಟೇನರ್‌ಗಳನ್ನು ಇಲ್ಲಿ ಇರಿಸಲಾಗಿದೆ. ಸ್ಫೋಟದ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಅದರಲ್ಲಿ ಹೊಗೆಯ ಮೋಡಗಳು ಗೋಚರಿಸುತ್ತವೆ.

ಈ ಸ್ಫೋಟ ನಡೆದ ಬಂದರ್ ಅಬ್ಬಾಸ್ ನಗರವು ಇರಾನ್‌ನ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 1000 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿರುವ ಪೆಟ್ರೋಲಿಯಂ ಸಂಸ್ಕರಣಾಗಾರದ ತೈಲ ಸೌಲಭ್ಯವು ಸ್ಫೋಟದಿಂದ ಪ್ರಭಾವಿತವಾಗಿಲ್ಲ. ಆದರೆ ವಾಹನಗಳು ಸಾಕಷ್ಟು ಹಾನಿಗೊಳಗಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read