ನವರಾತ್ರಿ ಉಪವಾಸದಲ್ಲಿದ್ದ ಐಪಿಎಸ್​ ಅಧಿಕಾರಿಗೆ ಸಪ್ರೈಸ್​ ನೀಡಿದ ಫ್ಲೈಟ್​ ಸಿಬ್ಬಂದಿ !

ಸಂಪೂರ್ಣ ದೇಶವೇ ಇದೀಗ ನವರಾತ್ರಿ ಅಚರಣೆಯಲ್ಲಿ ನಿರತವಾಗಿದೆ. ಅನೇಕರು ಒಂಬತ್ತು ದಿನಗಳ ಕಾಲ ಉಪವಾಸ ಕೂಡ ಮಾಡುತ್ತಾರೆ . ಉಪವಾಸ ಮಾಡುವವರು ಅಕ್ಕಿ, ಗೋಧಿ, ಈರುಳ್ಳಿ, ಬೆಳ್ಳುಳ್ಳಿ, ಮದ್ಯ, ಮಾಂಸಾಹಾರ, ಜಂಕ್​ಫುಡ್​ಗಳನ್ನೆಲ್ಲ ತ್ಯಜಿಸುತ್ತಾರೆ. ಈ ಸಂದರ್ಭದಲ್ಲಿ ಹಣ್ಣು ಹಾಗೂ ಹಾಲುಗಳನ್ನು ಸೇವನೆ ಮಾಡಬಹುದು.

ಹೀಗೆ ನವರಾತ್ರಿ ಉಪವಾಸದಲ್ಲಿರುವ ಹಿರಿಯ ಐಪಿಎಸ್​ ಅಧಿಕಾರಿ ಅರುಣ್​ ಮಲ್ಹೋತ್ರಾ ಇಂಡಿಗೋ ವಿಮಾನದಲ್ಲಿ ತಮ್ಮನ್ನು ಉಪಚರಿಸಿದ ಬಗೆಯನ್ನು ಶ್ಲಾಘಿಸಿದ್ದಾರೆ. ತಾವು ಉಪವಾಸದಲ್ಲಿರುವ ಕುರಿತು ಫ್ಲೈಟ್​ ಸಿಬ್ಬಂದಿಗೆ ಹೇಳಿದ ಬಳಿಕ ಅವರು ವೃತಕ್ಕೆ ಅನುಗುಣವಾದ ಆಹಾರವನ್ನೇ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಅರುಣ್​ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಫೋಟೋವನ್ನ ಶೇರ್​ ಮಾಡಿದ್ದಾರೆ. ಇಂಡಿಗೋ ಫ್ಲೈಟ್​ ಅಟೆಂಡೆಂಟ್​ ಪೂರ್ವಿ ತಮಗೆ ಒಂದು ಕಪ್​ ಚಹಾ, ಸಾಬುದಾನ ಚಿಪ್ಸ್​ ಹಾಗೂ ಚಿಕ್ಕಿಯನ್ನು ನೀಡೋದ್ರ ಜೊತೆಯಲ್ಲಿ ಸಣ್ಣ ಪತ್ರವನ್ನೂ ಕೊಟ್ಟಿದ್ದರು. ಇದರಲ್ಲಿ ಮಿ. ಬೋಥ್ರಾ ಅವರೇ, ಇಂದು ನೀವು ನಮ್ಮೊಂದಿಗೆ ಬಂದಿರೋದು ನಮಗೆ ಸಂತೋಷ ತಂದಿದೆ. ನವದುರ್ಗೆಯವರು ನಿಮಗೆ ಸಮೃದ್ಧಿ ನೀಡಲಿ ಅಂತಾ ಬರೆದಿದ್ದಾರೆ.

ಈ ತಿಂಡಿಗಳಿಗೆ ಐಪಿಎಸ್​ ಅಧಿಕಾರಿ ಹಣ ಪಾವತಿ ಮಾಡಲು ಹೋದಾಗ ಪೂರ್ವಿ ಹಣ ಸ್ವೀಕರಿಸಲು ನಿರಾಕರಿಸಿದ್ದಾರೆ ಹಾಗೂ ತಾವೂ ನವರಾತ್ರಿ ವೃತದಲ್ಲಿ ಇರೋದಾಗಿ ಹೇಳಿದ್ದಾರೆ. ಹೀಗಾಗಿ ನೀವು ಹಣ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ದೇವರು ಯಾವುದೋ ಯಾವುದೋ ರೂಪದಲ್ಲಿ ನಮ್ಮೆದುರು ಬರುತ್ತಾನಂತೆ. ಇಂದು ಆ ದೇವಿ ಪೂರ್ವಿ ರೂಪದಲ್ಲಿ ಬಂದಿರಬಹುದು ಅಂತಾ ಅರುಣ್​ ಬರೆದುಕೊಂಡಿದ್ದಾರೆ.

https://twitter.com/arunbothra/status/1714560387251642869

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read