ಬೀದಿಯಲ್ಲಿ ಬಾಲಕನಿಂದ ಎಲ್ಲಾ ಬಲೂನ್ ಖರೀದಿಸಿದ ಐಪಿಎಸ್ ಅಧಿಕಾರಿ: ಕರುಣಾಮಯಿ ಎಂದು ಪ್ರಶಂಸೆ

ಛತ್ತೀಸ್‌ ಗಢದ ದುರ್ಗ್‌ ನ ಎಸ್‌ಪಿ, ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು ಬೀದಿಯಲ್ಲಿ ಬಲೂನ್ ಮಾರಾಟ ಮಾಡುವ ಹುಡುಗನಿಗೆ ಸಹಾಯ ಮಾಡಿದ್ದಾರೆ.

ಕರುಣಾಮಯಿ ಪೊಲೀಸ್ ಅಧಿಕಾರಿ ಅಭಿಷೇಕ್ ಅವರು ಹುಡುಗನಿಂದ ಎಲ್ಲಾ ಬಲೂನ್ ಸ್ಟಾಕ್ ಖರೀದಿಸಿ ನಗುವಂತೆ ಮಾಡಿದ್ದಾರೆ. ಲಖಿಸರಾಯ್ ಲೈವ್ ಎಂಬ ಪೇಜ್ ಮೂಲಕ ಫೇಸ್ ಬುಕ್ ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಕ್ಲಿಪ್‌ನಲ್ಲಿ ಅಧಿಕಾರಿಯು ಪ್ರದೇಶವನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು.

ಅವರು ಮತ್ತು ಇತರ ಅಧಿಕಾರಿಗಳು ಬಲೂನ್‌ ಗಳನ್ನು ಮಾರುವ ಹುಡುಗನ ಪಕ್ಕದಲ್ಲಿ ನಿಂತಿರುವುದು ಕಂಡುಬರುತ್ತದೆ. ಐಪಿಎಸ್ ಅಧಿಕಾರಿ ಹುಡುಗನ ಬಳಿಗೆ ಬರುತ್ತಿದ್ದಂತೆ ಪಕ್ಕದಲ್ಲಿ ನಿಲ್ಲಿಸಿಕೊಂಡು ಅವನ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿ, ಅವನ ಬಲೂನ್-ಮಾರಾಟದ ವ್ಯವಹಾರ ಮತ್ತು ಪ್ರತಿ ಬಲೂನಿನ ಬೆಲೆಯ ಬಗ್ಗೆ ಹುಡುಗನನ್ನು ಕೇಳಿದ್ದಾರೆ. ಚಿಕ್ಕ ಹುಡುಗನಿಂದ ಎಲ್ಲಾ ಬಲೂನ್ ಗಳನ್ನು ಖರೀದಿಸಿದ್ದಾರೆ

ಐಪಿಎಸ್ ಅಭಿಷೇಕ್ ಪಲ್ಲವ್ ಈ ಮಗುವಿನ ಬಲೂನ್ ಮಾರುವ ಮುಖದಲ್ಲಿ ನಗುವನ್ನು ತಂದರು, ಪ್ರಶಂಸೆ ಗಳಿಸಿದರು” ಎಂದು ವೀಡಿಯೊ ಶೀರ್ಷಿಕೆ ನೀಡಲಾಗಿದ್ದು, ಇದನ್ನು 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಧಿಕಾರಿಯ ಕಾರ್ಯವೈಖರಿಗೆ ಹಲವರಿಂದ ಪ್ರಶಂಸೆ ವ್ಯಕ್ತವಾಗಿದೆ.

https://www.facebook.com/watch/lakhisarailive/

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read