ಸಂಗೀತ ಕಾರ್ಯಕ್ರಮಗಳಲ್ಲಿ ಹಣ ಎಸೆಯುವ ವಿರುದ್ಧ ಐಎಎಸ್​ ಅಧಿಕಾರಿ ಮಾತು; ಒಪ್ಪಿಕೊಂಡ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಶೇರ್​ ಮಾಡುವ ಐಪಿಎಸ್​ ಅಧಿಕಾರಿ ಬೋತ್ರಾ ಅವರು ಇದೀಗ, ಸಂಗೀತ ಕಾರ್ಯಕ್ರಮಗಳು ಮತ್ತು ಮದುವೆಯ ಆಚರಣೆಗಳ ಸಮಯದಲ್ಲಿ ಹಣ ಸುರಿಯುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದು ನೆಟಿಜನ್‌ಗಳ ಗಮನ ಸೆಳೆದಿದೆ.

“ಮದುವೆ ಸಮಾರಂಭಗಳು ಅಥವಾ ಸಂಗೀತ ಕಾರ್ಯಕ್ರಮಗಳಲ್ಲಿ ಕರೆನ್ಸಿ ನೋಟುಗಳನ್ನು ಎಸೆಯುವುದು ತುಂಬಾ ಹಾಸ್ಯಾಸ್ಪದ ವಿಷಯವಾಗಿದೆ” ಎಂದು ಅವರು ಬರೆದಿದ್ದಾರೆ.

ನೃತ್ಯ ಮತ್ತು ಸಂಗೀತ ಪ್ರದರ್ಶನಗಳ ಸಮಯದಲ್ಲಿ ಜನರು ಹಣವನ್ನು ಎಸೆಯುವುದನ್ನು ನಾನು ಯಾವಾಗಲೂ ದ್ವೇಷಿಸುತ್ತೇನೆ. ಕೆಲವರಿಗೆ ಹಣದ ಮೌಲ್ಯವು ಅರ್ಥವಾಗುವುದಿಲ್ಲ ಎಂದಿದ್ದಾರೆ.

ಮದುವೆ ಸಮಾರಂಭಗಳು ಅಥವಾ ಸಂಗೀತ ಕಾರ್ಯಕ್ರಮಗಳ ಸಮಯದಲ್ಲಿ ಕರೆನ್ಸಿ ನೋಟುಗಳನ್ನು ಎಸೆಯುವುದು ಅನಗತ್ಯ ಮತ್ತು ವ್ಯರ್ಥವಾದ ಆಚರಣೆಯಾಗಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದು, ಇದಕ್ಕೆ ಹಲವರು ಕಮೆಂಟ್​ ಮೂಲಕ ನಿಜ ಎಂದು ಹೇಳಿದ್ದಾರೆ. ಐಎಎಸ್​ ಅಧಿಕಾರಿಯ ಮಾತನ್ನು ನೂರಾರು ಮಂದಿ ಒಪ್ಪಿದ್ದಾರೆ.

ಇದೇ ರೀತಿ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮುಖದ ಮೇಲೆ ಕೇಕ್ ಬಳಿಯುವುದು ಕೂಡ ಹಣ ವ್ಯಯದ ಪ್ರಕ್ರಿಯೆಯಾಗಿದೆ. ಹಣದ ಮೌಲ್ಯ ಗೊತ್ತಿಲ್ಲದವರು ಹೀಗೆ ಮಾಡುತ್ತಾರೆ ಎಂದು ಹಲವು ಕಮೆಂಟಿಗರು ಹೇಳಿದ್ದಾರೆ.

https://twitter.com/arunbothra/status/1639123316022693889?ref_src=twsrc%5Etfw%7Ctwcamp%5Etweetembed%7Ctwterm%5E1639123316022693889%7Ctwgr%5Ec4fd6e5cc29911d8aacd36c954138492d4085b1c%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fips-officer-arun-bothras-opinion-on-throwing-currency-notes-during-marriages-music-events-goes-viral-netizens-react

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read