ಕ್ರಿಕೆಟ್, ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ ಮತ್ತು ಪ್ರಸ್ತುತ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹವಾ ಶುರುವಾಗಿದೆ. ಜನರು ತಮ್ಮ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮಕ್ಕಳು ಕೂಡ ಇದಕ್ಕೆ ಹೊರತಾಗಿಲ್ಲ.
ಈ ದಿನಗಳಲ್ಲಿ ಮಕ್ಕಳು ಸಹ ಆಟದ ಬಗ್ಗೆ ಭಾವುಕತೆ ಹೊಂದಿದ್ದಾರೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಒಬ್ಬ ಪುಟ್ಟ ಹುಡುಗಿ ಪ್ರತಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯದ ಮೊದಲು ಮನೆಯಲ್ಲಿ ಎಲ್ಲಾ ಹಳದಿ ವಸ್ತುಗಳನ್ನು ಸಂಗ್ರಹಿಸಿ ಇಡುತ್ತಿದ್ದಾಳೆ. ಈ ಮೂಲಕ ತನ್ನ ನೆಚ್ಚಿನ ತಂಡ ಗೆಲ್ಲಬೇಕೆಂದು ಬಯಸುತ್ತಿದ್ದಾಳೆ.
ಟ್ವಿಟರ್‌ನಲ್ಲಿ, ಪುಟ್ಟ ಹುಡುಗಿಯ ಚಿಕ್ಕಮ್ಮ, ಭಾವನಾ ತನ್ನ ಸೊಸೆ ತನ್ನ ಎಲ್ಲಾ ಹಳದಿ ವಸ್ತುಗಳನ್ನು ಸಂಗ್ರಹಿಸುತ್ತಾಳೆ ಮತ್ತು ಸಿಎಸ್‌ಕೆ ಮೈದಾನದಲ್ಲಿ ಪ್ರತಿ ಬಾರಿ ಟಿವಿ ಮುಂದೆ ಕುಳಿತುಕೊಳ್ಳುತ್ತಾಳೆ ಎಂದು ಶೇರ್ ಮಾಡಿಕೊಂಡಿದ್ದಾರೆ.
ಭಾವನಾ ಅವರ ಟ್ವೀಟ್ ಸಾವಿರಾರು ಇಂಟರ್ನೆಟ್ ಬಳಕೆದಾರರ ಗಮನ ಸೆಳೆಯಿತು. ಅದೇ ರೀತಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೂಡ ಈ ಬಾಲಕಿಯನ್ನು ಶ್ಲಾಘಿಸಿದೆ. ಜೊತೆಗೆ, ಸ್ವಿಗ್ಗಿ ಹಳದಿ ಪ್ಯಾಕೇಜಿಂಗ್‌ನೊಂದಿಗೆ ಎಲ್ಲಾ ಆಹಾರ ಪದಾರ್ಥಗಳಿಂದ ತುಂಬಿದ ದೊಡ್ಡ ಹ್ಯಾಂಪರ್‌ಗಳನ್ನು ಬಾಲಕಿಗೆ ಕಳುಹಿಸಿದ್ದು, ಅದೀಗ ವೈರಲ್ ಆಗಿದೆ.
https://twitter.com/bhawnakohli5/status/1659569815022108684?ref_src=twsrc%5Etfw%7Ctwcamp%5Etweetembed%7Ctwterm%5E1659569815022108684%7Ctwgr%5Ee57a8f53df30975be65b97ba5b603bae573fd39f%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fipl-2023-swiggy-sends-little-girl-hampers-filled-with-yellow-coloured-goodies-heres-why-4053726
https://twitter.com/SwiggyInstamart/status/1659856625077977090?ref_src=twsrc%5Etfw%7Ctwcamp%5Etweetembed%7Ctwterm%5E1659856625077977090%7Ctwgr%5Ee57a8f53df30975be65b97ba5b603bae573fd39f%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fipl-2023-swiggy-sends-little-girl-hampers-filled-with-yellow-coloured-goodies-heres-why-4053726