International Tiger day : ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 435ಕ್ಕೆ ಏರಿಕೆ : ವರದಿ

ಬೆಂಗಳೂರು : ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 435ಕ್ಕೆ ಏರಿಕೆಯಾಗಿದೆ ಎಂದು  ವರದಿಗಳು ತಿಳಿಸಿದೆ.ಟ್ರ್ಯಾಪ್ ಕ್ಯಾಮೆರಾ ವಿಧಾನದ ಮೂಲಕ ಮೌಲ್ಯಮಾಪನ ಮಾಡಲಾಗಿದ್ದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ 2018 ರಲ್ಲಿ 404 ಕ್ಕೆ ಇದ್ದು, 2022 ರಲ್ಲಿ 435 ಕ್ಕೆ ಏರಿದೆ ಎಂದು ಕರ್ನಾಟಕ ಅರಣ್ಯ ಇಲಾಖೆ ತಿಳಿಸಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಅಖಿಲ ಭಾರತ ಹುಲಿ ಗಣತಿ ವರದಿಯನ್ನು ಇಂದು ಬಿಡುಗಡೆ ಮಾಡಿದಾಗ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿದೆ. 2018ರಲ್ಲಿ ಕರ್ನಾಟಕ 524 ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 526 ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲಿತ್ತು.

ಅಂತಾರಾಷ್ಟ್ರೀಯ ಹುಲಿ ದಿನಾಚರಣೆಗೂ ಮುನ್ನ ಅರಣ್ಯ ಸಚಿವ ಈಶ್ವರ ಖಂಡ್ರೆ ಅಖಿಲ ಭಾರತ ಹುಲಿ ಅಂದಾಜು (ಎಐಟಿಇ) 2022 ರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದರು. ರಾಜ್ಯದ ಅರಣ್ಯ ಇಲಾಖೆ 2022 ರಲ್ಲಿ 31 ಜಿಲ್ಲೆಗಳ ಎಲ್ಲಾ 37 ಅರಣ್ಯ ವಿಭಾಗಗಳಲ್ಲಿ ಹುಲಿ ಅಂದಾಜು ಕಾರ್ಯವನ್ನು ನಡೆಸಿತ್ತು. 2018ರಲ್ಲಿ ಕರ್ನಾಟಕ 524 ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 526 ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲಿತ್ತು. 2018-22ರ ಸಮೀಕ್ಷೆಯ ಪ್ರಕಾರ ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಅತಿಹೆಚ್ಚು ಅಂದರೆ 149 ಹುಲಿಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 143 ಹುಲಿಗಳಿವೆ. ಇದರಿಂದ ಒಟ್ಟಾರೆ ಕರ್ನಾಟಕದಲ್ಲಿ 2022ರ ಹೊತ್ತಿಗೆ ಹುಲಿಗಳ ಸಂಖ್ಯೆ 435ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read