ಬಡ್ಡಿ ಸಹಾಯಧನ, ಉಚಿತವಾಗಿ 5 ಸಾವಿರ ರೂ. ಮೌಲ್ಯದ ಕಿಟ್ ಸೇರಿ ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ

ದಾವಣಗೆರೆ: ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮಾಂತರ ಕೈಗಾರಿಕಾ ವಿಭಾಗದಿಂದ ಹೊಲಿಗೆಯಂತ್ರ ವಿತರಣೆ, ಕುಶಲಕರ್ಮಿಗಳಿಗೆ ಬ್ಯಾಂಕ್ ಸಾಲದ ಮೇಲೆ ವಿಧಿಸುವ ಬಡ್ತಿ ಮೊತ್ತದ ಮೇಲೆ ಬಡ್ಡಿ ಸಹಾಯಧನ ಹಾಗೂ ಟೈಲರಿಂಗ್, ಹ್ಯಾಂಡ್ ಎಂಬ್ರಾಯಡರಿ, ಡೊಮೆಸ್ಟಿಕ್ ಎಲಕ್ಟ್ರಿಷಿಯನ್, ಮೋಟಾರ್ ರೀವೈಂಡಿಂಗ್, ಮೊಬೈಲ್ ರಿಪೇರಿ, ಬ್ಯೂಟಿ ಥೆರಪಿಸ್ಟ್, ಕಂಪ್ಯೂಟರ್, ಎಫ್.ಟಿ.ಸಿ.ಪಿ. ತರಬೇತಿ ನೀಡಿ ಉಚಿತವಾಗಿ 5,000 ರೂ. ಮೌಲ್ಯದ ಉಪಕರಣಗಳ ಕಿಟ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಗ್ರಾಮೀಣ ಅಭ್ಯರ್ಥಿಗಳು ಆಕ್ಟೋಬರ್ 24 ರೊಳಗೆ  davanagere.nic.in     ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳೊಂದಿಗೆ ಆಕ್ಟೋಬರ್ 31 ರೊಳಗೆ ಗ್ರಾಮಾಂತರ ಕೈಗಾರಿಕಾ ವಿಭಾಗ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ದಾವಣಗೆರೆ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ. 9448944050, 9448758540, 9448929717. ಗೆ ಸಂಪರ್ಕಿಸಬಹುದಾಗಿದೆ ಎಂದು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪ ನಿದೇಶಕರಾದ ವೀರೇಶನಾಯ್ಕ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read