ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ: 50 ಲಕ್ಷ ರೂ. ವಿಮೆ ಹಣಕ್ಕಾಗಿ ಅಣ್ಣನನ್ನೇ ಕೊಲೆಗೈದ ತಮ್ಮ

ಬೆಳಗಾವಿ: 50 ಲಕ್ಷ ರೂಪಾಯಿ ವಿಮೆ ಹಣಕ್ಕಾಗಿ ತಮ್ಮನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ನಡೆದಿದೆ.

ಘಟಪ್ರಭಾ ಠಾಣೆಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ ತಳವಾರ, ಆತನ ಸಹಚರರಾದ ಬಾಬು ಶೇಖ್, ಈರಪ್ಪ ಹಡಗಿನಾಳ, ಸಚಿನ್ ಅವರನ್ನು ಬಂಧಿಸಿದ್ದಾರೆ. ಹನುಮಂತ ಗೋಪಾಲ ತಳವಾರ(35) ಕೊಲೆಯಾದ ವ್ಯಕ್ತಿ.

ನವೆಂಬರ್ 7ರಂದು ಮೂಡಲಗಿ – ಕಲ್ಲೋಳಿ ರಸ್ತೆಯ ಸಮೀಪ ಅಪರಿಚಿತ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ವೈದ್ಯರು ಇದು ಸಹಜ ಸಾವಲ್ಲವೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ನಂತರ ಇದು ಹನುಮಂತ ಗೋಪಾಲ ತಳವಾರನ ಮೃತ ದೇಹ ಎನ್ನುವುದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ. ಅನುಮಾನದ ಮೇಲೆ ಹಲವರನ್ನು ವಿಚಾರಣೆಗೊಳಪಡಿಸಿದಾಗ ಭಿನ್ನ ಹೇಳಿಕೆ ನೀಡಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹನುಮಂತ ಹೆಸರಲ್ಲಿ ಬಸವರಾಜ ಒಂದು ವರ್ಷದ ಹಿಂದೆ 50 ಲಕ್ಷ ರೂಪಾಯಿ ವಿಮೆ ಪಾಲಿಸಿ ಮಾಡಿಸಿದ್ದ. ಆ ಪಾಲಿಸಿಗೆ ತಾನೇ ನಾಮಿನಿ ಆಗಿದ್ದ. ಅಣ್ಣನ ಕೊಲೆ ಮಾಡಿ ಆ ಹಣ ಪಡೆಯಲು ಸಂಚು ರೂಪಿಸಿದ್ದ. ಅಂತೆಯೇ ಆರೋಪಿಗಳೆಲ್ಲರೂ ಸೇರಿ ಪ್ಲಾನ್ ಮಾಡಿ ಹನುಮಂತನಿಗೆ ಮದ್ಯ ಕೊಡಿಸಿ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿ ಶವ ಬಿಸಾಡಿದ್ದಾರೆ. ಸಹಚರರಿಗೆ ಹಣ ನೀಡುವುದಾಗಿ ಬಸವರಾಜ ತಿಳಿಸಿದ್ದ ಎನ್ನಲಾಗಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read