ಸ್ಥಳೀಯ ಸಂಸ್ಥೆ ಚುನಾವಣಾ ನೀತಿ ಸಂಹಿತೆ: ಶಸ್ತ್ರಾಸ್ತ್ರಗಳ ಠೇವಣಿಗೆ ಆದೇಶ

ಬೆಂಗಳೂರು: ಚುನಾವಣಾ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ  ಪರವಾನಗಿ ಪಡೆದ ಶಸ್ತ್ರಾಸ್ತ್ರಗಳ ಠೇವಣಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ  ತೆರವಾದ ಖಾಲಿ ಸ್ಥಾನಗಳಿಗೆ ಉಪ ಚುನಾವಣೆ-2024 ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಉಪ  ಚುನಾವಣೆಯನ್ನು ಶಾಂತಿಯುತವಾಗಿ  ನಡೆಸಲು ಭಾರತೀಯ  ಶಸ್ತ್ರ ಕಾಯ್ದೆ  1956 ರ ಕಲಂ 4 ಕಲಂ 21 ಮತ್ತು ಕಲಂ  24 –ಎ (1) ರಡಿಯಲ್ಲಿ  ಪ್ರದತ್ತವಾದ  ಅಧಿಕಾರವನ್ನು ಚಲಾಯಿಸುತ್ತಾ, ಉಪ ಚುನಾವಣೆ ಇರುವ ಪ್ರದೇಶಗಳಲ್ಲಿ ಹೊಂದಿರುವ  ಶಸ್ತ್ರ ಪರವಾನಿಗೆದಾರರು ತಮ್ಮ ಶಸ್ತ್ರಾಸ್ತ್ರಗಳನ್ನು(ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಹಾಗೂ ರಿಸರ್ವ್ ಬ್ಯಾಂಕ್ ಅವರಿಂದ ಅನುಮೋದಿಸಿದ ಷಡ್ಯೂಲ್ ಬ್ಯಾಂಕ್ ಗಳ ಸೆಕ್ಯೂರಿಟ್ ಗಾರ್ಡ್ ಗಳ ಶಸ್ತ್ರಗಳನ್ನು  ಹೊರತುಪಡಿಸಿ)  ತಕ್ಷಣದಿಂದಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ನಿಯಮ 2016ರ  ನಿಯಮ 47 ರಂತೆ  ದಿನಾಂಕ 28-11-2024ರ ವರೆಗೆ  ಶಸ್ತ್ರಾಸ್ತ್ರಗಳನ್ನು ಠೇವಣೆ ಮಾಡಲು ಆದೇಶಿಸಿದೆ.

ಆದರಂತೆ ಭಾರತೀಯ ದಂಡ ಸಂಹಿತೆ  1973 ರ ಕಲಂ 144 [ಬಿ.ಎನ್.ಎಸ್.ಕಾಯ್ದೆ ಕಲಂ 189 (4) ]  ರಡಿ ಯಾವುದೇ ಶಸ್ತ್ರ ಪರವಾನಿಗೆದಾರರು ತಮ್ಮ ಶಸ್ತ್ರವನ್ನು (ಆಯುಧಗಳನ್ನು) ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊತ್ತೊಯುವುದು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ  ಜಿಲ್ಲಾ ದಂಡಾಧಿಕಾರಿಗಳಾದ ಜಿ.ಜಗದೀಶ್ ಆದೇಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read