‘ಫಾಲೋವರ್ಸ್’ ಗಳನ್ನೇ ಸೆಕ್ಸ್ ವರ್ಕರ್ ಆಗಲು ಪ್ರೇರೇಪಿಸುತ್ತಿದ್ದ ಮಾಡೆಲ್; ನ್ಯಾಯಾಲಯದಿಂದ 8 ವರ್ಷ ಜೈಲು

ಮಾಜಿ ಬ್ರೆಜಿಲಿಯನ್ ಮಾಡೆಲ್ ಮತ್ತು ಯುಎಸ್ ಮೂಲದ ಪ್ರಭಾವಿ ಕ್ಯಾಟ್ ಟೊರೆಸ್‌ಗೆ ಮಾನವ ಕಳ್ಳಸಾಗಣೆ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದ ತನಿಖೆ ನಡೆಸಿದ ಎಫ್‌ಬಿಐ, ಕ್ಯಾಟ್‌ ಟೊರೆಸ್‌ ಜೊತೆ ವಾಸವಾಗಿದ್ದ ಇಬ್ಬರು ಮಹಿಳೆಯರು 2022ರಲ್ಲಿ ನಾಪತ್ತೆಯಾಗಿದ್ದನ್ನು ಕಂಡು ಹಿಡಿದಿತ್ತು. ಕ್ಯಾಟ್ ಟೊರೆಸ್ ಜೊತೆ ಕೆಲಸ ಮಾಡಿದ ಮಹಿಳೆಯರು ತಾವು ಕೂಡ ಕಳ್ಳಸಾಗಣೆ ಮತ್ತು ಗುಲಾಮಗಿರಿಗೆ ಒಳಗಾಗಿದ್ದೇವೆ ಎಂದು ಹೇಳಿದ್ದಾರೆ. ಟೊರೆಸ್ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಟೊರೆಸ್‌ ಹೇಗೆ ಶ್ರೀಮಂತಿಕೆ ಪಡೆದಳು, ಹಾಲಿವುಡ್‌ ಸ್ಟಾರ್ಸ್‌ ಗಳನ್ನು ಹೇಗೆ ಆಕರ್ಷಿಸಿದಳು ಎಂಬುದನ್ನು ಅವರು ಹೇಳಿದ್ದಾರೆ.

ಟೊರೆಸ್‌, ಲಿಯೊನಾರ್ಡೊ ಡಿಕಾಪ್ರಿಯೊ ಜೊತೆ ಡೇಟಿಂಗ್‌ ಮಾಡಿದ ಸುದ್ದಿ ಹರಡಿತ್ತು. ಬ್ರೆಜಿಲಿಯನ್‌ ಟಿವಿ ಶೋನಲ್ಲಿ ಆಗಾಗ ಕಾಣಿಸಿಕೊಳ್ಳುವ ಪ್ರಸಿದ್ಧ ವ್ಯಕ್ತಿ ಟೊರೆಸ್‌, ಭವಿಷ್ಯ ಕೂಡ ಹೇಳ್ತಾಳೆ. ಅಯಾಹುವಾಸ್ಕಾ ಎಂಬ ಭ್ರಮೆಗೆ ಒಳಪಡುವ ಔಷಧಿ ಬಳಸುತ್ತಿದ್ದ ಆಕೆ, ಫಿಟ್ನೆಸ್‌ ಗೆ ಸಂಬಂಧಿಸಿದ ವೆಬ್‌ ಸೈಟ್‌ ಶುರು ಮಾಡಿದ್ದಳು. ಅದ್ರಲ್ಲಿ ಹಣ, ಪ್ರೀತಿ, ಸ್ವಾಭಿಮಾನದ ಬಗ್ಗೆ ಭರವಸೆ ನೀಡಿದ್ದಳು.

ಸಂಮೋಹನ, ಧ್ಯಾನ ಮತ್ತು ವ್ಯಾಯಾಮ ಕಾರ್ಯಕ್ರಮಗಳು ಸೇರಿದಂತೆ ಸಂಬಂಧಗಳು, ಆರೋಗ್ಯ, ವ್ಯವಹಾರದ ಯಶಸ್ಸಿನ ಕುರಿತು ಸಲಹೆ ನೀಡುವ ವಿಡಿಯೋ ಮಾಡ್ತಿದ್ದಳು. ಯಾವುದೇ ಸಮಸ್ಯೆಗೆ ಪರಿಹಾರ ನೀಡಲು 150 ಡಾಲರ್‌ ಚಾರ್ಜ್‌ ಮಾಡ್ತಿದ್ದಳು.

ಮನೆಯಲ್ಲಿ ಕೆಲಸಕ್ಕೆ ಬರುವ ಅಥವಾ ತರಬೇತಿ ನೀಡುವುದಾಗಿ ಮಹಿಳೆಯರನ್ನು ಕರೆಯಿಸಿಕೊಳ್ತಿದ್ದ ಈಕೆ ಅವರಿಗೆ ಚಿತ್ರಹಿಂಸೆ ನೀಡ್ತಿದ್ದಳು. ಅಲ್ಲದೆ ವೇಶ್ಯಾವಾಟಿಕೆಗೆ ಹೋಗುವಂತೆ ಆಕೆ ಮಹಿಳೆಯರ ಮನಸ್ಸು ಬದಲಿಸುತ್ತಿದ್ದಳು. 20ಕ್ಕೂ ಹೆಚ್ಚು ಮಹಿಳೆಯರಿಗೆ ಆಕೆ ಚಿತ್ರಹಿಂಸೆ ನೀಡಿ, ವೇಶ್ಯಾವಾಟಿಕೆ ನಡೆಸಿದ ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read