Viral News | ಚುಂಬಿಸುವಾಗ ಸಮಸ್ಯೆಯಾಗುತ್ತಿದೆ ಎಂದು ನಾಲಿಗೆಯನ್ನೇ ಕತ್ತರಿಸಿಕೊಂಡ ಯುವತಿ….!

ನಟ – ನಟಿಯರು ತಾವು ಅಂದವಾಗಿ ಕಾಣಬೇಕು ಅಂತ, ಕಣ್ಣು, ಮೂಗು, ತುಟಿ, ಕೆನ್ನೆ ಇವುಗಳ ಪ್ಲಾಸ್ಟಿಕ್ ಸರ್ಜರಿ ಅಥವಾ ಶಸ್ತ್ರಚಿಕಿತ್ಸೆಯನ್ನ ಮಾಡಿಕೊಂಡಿರುವುದನ್ನ ಕೇಳಿರ್ತಿರಾ.

ಇನ್ನೂ ಕೆಲವರು ತಮ್ಮ ತಮ್ಮ ದೇಹದ ಆಕಾರದಿಂದ ತೃಪ್ತರಾಗಿರುವುದಿಲ್ಲ.ಆದ್ದರಿಂದ ಅದರ ಆಪರೇಷನ್ ಮಾಡಿಕೊಂಡು ತಮ್ಮಿಷ್ಟದಂತೆ ದೇಹದಲ್ಲಿ ಆಕಾರವನ್ನ ಬದಲಾಯಿಸಿಕೊಳ್ಳೋದಕ್ಕೆ ಇಚ್ಛಿಸುತ್ತಾರೆ. ಎಷ್ಟೋ ಬಾರಿ ಇವರ ಈ ಹುಚ್ಚಾಸೆಗಳಿಂದ ದೊಡ್ಡ ಎಡವಟ್ಟೇ ಆಗೋಗಿರುತ್ತೆ.

22 ವರ್ಷದ ರೋಚೆಲ್ ಗ್ಯಾರೆಟ್, ನ್ಯೂಯಾರ್ಕ್ ಪೋಸ್ಟ್ ವೆಬ್ ಸೈಟ್‌ನ ವರದಿಯ ಪ್ರಕಾರ, ರೋಚೆಲ್ ಗ್ಯಾರೆಟ್‌ನ್ನ ಸೋಶಿಯಲ್ ಮೀಡಿಯಾದಲ್ಲಿ (Xehli G) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈಕೆ ಈಗ ತನ್ನ ನಾಲಿಗೆಗೇನೇ ಕತ್ತರಿ ಹಾಕಿಸಿಕೊಂಡಿದ್ದಾಳೆ.

ಅದು ಕೂಡಾ ಯಾವ ಕಾರಣಕ್ಕೆ ಗೊತ್ತಾ..? ತಾನೊಬ್ಬಳು ಬೇಸ್ಟ್ ಕಿಸ್ಸರ್ (ಚುಂಬನ) ಆಗಬೇಕು ಅನ್ನೋ ಆಸೆಗೆ. ಪೋಷಕರು ಇದಕ್ಕೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಈಕೆ ಹಠ ಹಿಡಿದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ರೋಚೆಲ್‌ಗೆ ಕಡಿಮೆಯಂದ್ರೂ 5 ಲಕ್ಷಕ್ಕೂ ಹೆಚ್ಚು ಜನರು ಫಾಲೋವರ್ಸ್‌ಗಳಿದ್ದಾರೆ. ವರದಿಯ ಪ್ರಕಾರ, ರೋಚೆಲ್ ತನ್ನ ನಾಲಿಗೆಯ ಒಂದು ಸಣ್ಣ ಭಾಗವನ್ನು ಕತ್ತರಿಸಿಕೊಂಡಿದ್ದಾರೆ.

ರೋಚೆಲ್ ಉತ್ತಮ ಕಿಸ್ಸರ್ ಆಗೋ ಆಸೆ. ಆಕೆಯ ಉದ್ದ ನಾಲಿಗೆಯಿಂದಾಗಿ ಆಕೆಗೆ ಚುಂಬಿಸಲು ಸಮಸ್ಯೆಗಳಾಗುತ್ತಿದ್ದವು. ಆದ್ದರಿಂದ ನಾಲಿಗೆ ಕತ್ತರಿಸಿಕೊಳ್ಳದೇ ಬೇರೆ ವಿಧಿಯೇ ಇಲ್ಲ, ಎಂದು ಈಕೆ ಹೇಳಿಕೊಂಡಿದ್ದಾಳೆ.

ರೋಚೆಲ್‌ಗೆ ನಾಲಿಗೆಯ ಫ್ರೆನ್ಯುಲಮ್, ಅಂದರೆ, ನಾಲಿಗೆ ಮತ್ತು ಬಾಯಿಯ ಕೆಳಭಾಗವನ್ನು ಜೋಡಿಸಲಾದ ಅಂಗಾಂಶವು ತುಂಬಾ ಚಿಕ್ಕದಾಗಿದೆ ಎಂದು ಅವರು ಹೇಳಿದರು. ಇದರಿಂದಾಗಿ ಅವರ ನಾಲಿಗೆ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಅವರು ಈ ಭಾಗವನ್ನು ಕತ್ತರಿಸಿ ಬೇರ್ಪಡಿಸಿದ್ದಾರೆ.

ಈ ಹಿಂದೆ ಅವಳು ತನ್ನ ಸಂಗಾತಿಯನ್ನು ಚುಂಬಿಸುವಾಗ ತನ್ನ ನಾಲಿಗೆಯಿಂದಾಗಿ ಕೆಟ್ಟ ಅನುಭವವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಈ ಶಸ್ತ್ರಚಿಕಿತ್ಸೆಯನ್ನು ಮಾಡಿದ ನಂತರ, ಮೊದಲಿಗಿಂತ ಉತ್ತಮ ಕಿಸ್ಸರ್ ಆಗಿದ್ದೇನೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read