ಅರ್ಚಕನ ಸೋಗಿನಲ್ಲಿ ದೇಗುಲಕ್ಕೆ ಕನ್ನ ಹಾಕ್ತಿದ್ದ ಆಸಾಮಿ ಪೊಲೀಸರ ಬಲೆಗೆ

ಅರ್ಚಕನ ಸೋಗಿನಲ್ಲಿ ದೇಗುಲಕ್ಕೆ ಕನ್ನ ಹಾಕ್ತಿದ್ದ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮುಂಬೈನ ಜೈನ ದೇವಸ್ಥಾನದಲ್ಲಿ ಚಿನ್ನದ ತಟ್ಟೆಗಳು ಮತ್ತು ಇತರ ವಸ್ತುಗಳನ್ನು ಕದಿಯುತ್ತಿದ್ದ 53 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಸುಖರಾಜ್ ಎಂಬ ವ್ಯಕ್ತಿ ಅರ್ಚಕನ ಸೋಗಿನಲ್ಲಿ ಜೈನ ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ.

ಕ್ರೈಮ್ ಪೆಟ್ರೋಲ್ ಹೆಸರಿನ ದೂರದರ್ಶನ ಸರಣಿಯಿಂದ ಸ್ಫೂರ್ತಿ ಪಡೆದು ದರೋಡೆಗೆ ಯೋಜನೆ ರೂಪಿಸಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ.

ದಿಂಡೋಶಿ ಪೊಲೀಸ್ ಅಧಿಕಾರಿಯ ಪ್ರಕಾರ ಈತ ಪ್ರತಿನಿತ್ಯ ಅರ್ಚಕನ ಸೋಗಿನಲ್ಲಿ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದನು.

ಈ ಹಿಂದೆ ಈತ ಇತರ ಜೈನ ದೇವಾಲಯಗಳಿಂದ ಬೆಳ್ಳಿಯ ಪಾತ್ರೆಗಳನ್ನು ಕದ್ದಿದ್ದ. ಆದರೆ ಕಳ್ಳತನವಾದ ವಸ್ತುಗಳ ಬೆಲೆ ಕಡಿಮೆ ಆಗಿದ್ದರಿಂದ ಯಾರೂ ದೂರು ದಾಖಲಿಸಿರಲಿಲ್ಲ.

ಆರೋಪಿಯನ್ನು ಹಿಡಿಯಲು ಪೊಲೀಸರು ಸುಮಾರು 93 ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಕಳ್ಳತಕನದ ವೇಳೆ ಚಿನ್ನದ ತಗಡುಗಳೊಂದಿಗೆ ಆತ ದೇವಸ್ಥಾನದಿಂದ ನಿರ್ಗಮಿಸುತ್ತಿದ್ದ.

ಮನೆಗೆ ವಾಪಸಾಗುವಾಗ ಸಿಸಿಕ್ಯಾಮೆರಾ ಅಳವಡಿಸದ ದಾರಿಯನ್ನು ಆಯ್ದುಕೊಳ್ಳುತ್ತಿದ್ದ. ಆರೋಪಿಯು ಸಾಮಾನ್ಯವಾಗಿ ದೇವಸ್ಥಾನದಿಂದ ದೂರದಲ್ಲಿ ತನ್ನ ಸ್ಕೂಟರ್ ಅನ್ನು ನಿಲ್ಲಿಸಿದ ನಂತರ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದನು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read