10 ವರ್ಷಗಳ ಬಳಿಕ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ ರಾಮ್‌ ಚರಣ್‌ ದಂಪತಿ; ವಿಡಿಯೋ ವೈರಲ್

ಮದುವೆಯಾದ 10 ವರ್ಷದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟ ರಾಮ್ ಚರಣ್‌ ಪತ್ನಿ ಉಪಾಸನಾ ಬೇಬಿ ಶೋವರ್ ನಲ್ಲಿ ಸಂಭ್ರಮಿಸಿದ್ದಾರೆ.

ಉಪಾಸನಾ ಕಾಮಿನೇನಿ ಬೇಬಿ ಶೋವರ್ ಸಂಭ್ರಮದ ಕ್ಷಣಗಳನ್ನ ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಪತಿ ರಾಮ್‌ ಚರಣ್‌ ರೊಂದಿಗಿರುವ ಉಪಾಸನಾ ಕುಟುಂಬದೊಂದಿಗೆ ಈ ಸುಮಧುರ ಕ್ಷಣಗಳನ್ನು ಆಚರಿಸಿದ್ದಾರೆ.

ಇಬ್ಬರೂ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿದ್ದು ಉಪಾಸನಾ ಮತ್ತು ರಾಮ್ ಚರಣ್ ಒಟ್ಟಿಗೆ ಕೇಕ್ ಕತ್ತರಿಸುತ್ತಿರುವ ತುಣುಕುಗಳು ವಿಡಿಯೋದಲ್ಲಿದೆ.

“ಎಲ್ಲರ ಪ್ರೀತಿಗೆ ತುಂಬಾ ಕೃತಜ್ಞತೆಗಳು. ಅತ್ಯುತ್ತಮ ಬೇಬಿ ಶೋವರ್‌ಗಾಗಿ ನನ್ನ ಪ್ರೀತಿಯ ಸಹೋದರಿಯರಾದ ಅನುಷ್ಪಾಲಾ ಕಾಮಿನೇನಿ ಮತ್ತು ಸಿಂಧೂರಿ ರೆಡ್ಡಿ ಅವರಿಗೆ ಧನ್ಯವಾದಗಳು.” ಎಂದು ವಿಡಿಯೋಗೆ ಶೀರ್ಷಿಕೆ ಕೊಟ್ಟಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ 2012 ರಲ್ಲಿ ವಿವಾಹವಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read