BIG NEWS: EPF ನಿಷ್ಕ್ರಿಯ ಖಾತೆಗಳಲ್ಲಿ ಉಳಿದಿದೆ ಬರೋಬ್ಬರಿ 8500 ಕೋಟಿ ರೂ.

ನವದೆಹಲಿ: ಕಳೆದ ಆರು ವರ್ಷಗಳಲ್ಲಿ ನಿಷ್ಕ್ರಿಯಗೊಂಡಿರುವ ಭವಿಷ್ಯ ನಿಧಿ ಖಾತೆಯ ಪ್ರಮಾಣ 5 ಪಟ್ಟು ಹೆಚ್ಚಳವಾಗಿದೆ. ಅದರಲ್ಲಿ 8505.23 ಕೋಟಿ ರೂ. ನಷ್ಟು ಹಣ ಬಾಕಿ ಉಳಿದುಕೊಂಡಿದೆ.

ನಿಷ್ಕ್ರಿಯ ಖಾತೆಗಳ ಸಂಖ್ಯೆ 2018 -19 ರ ಹಣಕಾಸು ವರ್ಷದಲ್ಲಿ 6.91 ಲಕ್ಷ ಇದ್ದು, ಇದರಲ್ಲಿದ್ದ ಮೊತ್ತ 1,638 ಕೋಟಿ ರೂಪಾಯಿಗಳಷ್ಟಿತ್ತು. ಇಂತಹ ಖಾತೆಗಳ ಸಂಖ್ಯೆ 2023- 24 ರಲ್ಲಿ 21.55 ಲಕ್ಷಕ್ಕೆ ಏರಿಕೆಯಾಗಿದ್ದು, ಒಟ್ಟು ಮೊತ್ತ 8505 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ನೌಕರರ ಭವಿಷ್ಯ ನಿಧಿ ಯೋಜನೆ 1952ರ ಪ್ರಕಾರ ಕೆಲವು ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ವರ್ಗೀಕರಿಸಲಾಗಿದೆ. ಈ ನಿಷ್ಕ್ರಿಯ ಖಾತೆಗಳಲ್ಲಿರುವ ಮೊತ್ತವನ್ನು ಇಪಿಎಫ್ ಸಂಬಂಧಿಸಿದ ಫಲಾನುಭವಿಗಳಿಗೆ ಹಿಂತಿರುಗಿಸುತ್ತದೆ. ಸದಸ್ಯರು ಕ್ಲೇಮು ಮಾಡಿಕೊಳ್ಳಬೇಕು. ಇದರ ಕುರಿತು ಶೈಕ್ಷಣಿಕ ವಿಡಿಯೋಗಳು, ಸಾಮಾಜಿಕ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಉದ್ಯೋಗಿಗಳಿಗೆ ಇಪಿಎಫ್ ನಿಧಿಯನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read