ಇನ್ನೋವಾ ಕ್ರಿಸ್ಟಾ GX+ ಈಗ ಹೊಸ ಸ್ಟ್ಯಾಂಡರ್ಡ್ ಗ್ರೇಡ್ ರೂಪದಲ್ಲಿ ಪರಿಚಯ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇನ್ನೋವಾ ಕ್ರಿಸ್ಟಾ ಸರಣಿಯಲ್ಲಿ ನೂತನ ಗ್ರೇಡ್ GX+ ಅನ್ನು ಪರಿಚಯಿಸಿದೆ. ಕಂಪನಿಯ ಗ್ರಾಹಕ ಕೇಂದ್ರಿತ ಗಮನದಿಂದ ಪ್ರೇರಿತವಾದ ನೂತನ ಶ್ರೇಣಿಯು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಅತ್ಯುತ್ತಮವಾದದನ್ನು ವಿತರಿಸುವ ಟಿಕೆಎಂನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇನ್ನೋವಾ ಕ್ರಿಸ್ಟಾ ಲೈನ್ ಅಪ್ ಅನ್ನು ಪುನರುಜ್ಜೀವನಗೊಳಿಸುತ್ತಾ ಹೊಸದಾಗಿ ಪರಿಚಯಿಸಲಾದ ಇನ್ನೋವಾ ಕ್ರಿಸ್ಟಾ GX+ ಗ್ರೇಡ್ 14 ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. ಸುಧಾರಿತ ಕ್ರಿಯಾತ್ಮಕ ಮತ್ತು ಸೌಂದರ್ಯದ ಸಾಮರಸ್ಯವನ್ನು ಇದು ಬೆಸೆಯುತ್ತಿದ್ದು, ಒಟ್ಟಾರೆ ಚಾಲನಾ ಅನುಭವವನ್ನು ಹೆಚ್ಚಿಸುತ್ತದೆ.

ಇನ್ನೋವಾ ಕ್ರಿಸ್ಟಾ GX+ ನ ಪ್ರಮುಖ ಹೈಲೈಟ್ ಗಳಲ್ಲಿ ರಿಯರ್ ಕ್ಯಾಮೆರಾ, ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್ ನಂತಹ ಕ್ರಿಯಾತ್ಮಕ ವೈಶಿಷ್ಟ್ಯಗಳು ಮತ್ತು ಡೈಮಂಡ್-ಕಟ್ ಲಾಯ್ಸ್, ವುಡನ್ ಪ್ಯಾನೆಲ್, ಪ್ರೀಮಿಯಂ ಫ್ಯಾಬ್ರಿಕ್ ಸೀಟ್ಸ್ ನಂತಹ ಸೌಂದರ್ಯ ಸುಧಾರಣೆಗಳು ಇದರಲ್ಲಿ ಸೇರಿವೆ. 7- ಮತ್ತು 8-ಸೀಟರ್ ಆಯ್ಕೆಗಳಲ್ಲಿ ನೀಡಲಾಗುವ GX+ ಗ್ರೇಡ್ ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ನೂತನ ವಾಹನ ಹೊರಬರಲಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read