ಖಾಸಗಿ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಕಡ್ಡಾಯ: ಆರೋಗ್ಯ ಇಲಾಖೆ ಸುತ್ತೋಲೆ

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ ವೈದ್ಯಕೀಯ ಸಂಸ್ಥೆಗಳು ನೋಂದಣಿ ಸಂಖ್ಯೆ, ಸಂಸ್ಥೆ, ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.

ಈ ಮೊದಲು ನಿಗದಿಪಡಿಸಿದ ಅಳತೆಯ ಫಲಕಗಳನ್ನು ಕ್ಲಿನಿಕ್ ಗಳಲ್ಲಿ ಅಳವಡಿಕೆ ಮಾಡುವುದು ಕಷ್ಟ ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದ್ದು, ಅಳತೆಯ ನಿಯಮ ಸಡಿಲಿಕೆ ಮಾಡಲು ಕೋರಲಾಗಿತ್ತು. ಹೀಗಾಗಿ ಮಾಹಿತಿ ಫಲಕದ ಅಳತೆಯನ್ನು ಕನಿಷ್ಠ ಐದು ಅಡಿ ಅಗಲ 2.5 ಅಡಿ ಉದ್ದಕ್ಕೆ ನಿಗದಿಪಡಿಸಲಾಗಿದೆ.

ಮಾಹಿತಿ ಫಲಕದ ಮೊದಲನೇ ಸಾಲಿನಲ್ಲಿ ಕೆಪಿಎಂಇ ನೋಂದಣಿ ಸಂಖ್ಯೆ, ಎರಡನೇ ಸಾಲಿನಲ್ಲಿ ಆಸ್ಪತ್ರೆಯ ಹೆಸರು, ಮೂರನೇ ಸಾಲಿನಲ್ಲಿ ಮಾಲೀಕರು ಅಥವಾ ವ್ಯವಸ್ಥಾಪಕರ ಹೆಸರುಗಳನ್ನು ನಮೂದಿಸಬೇಕು. ನಮೂದಿಸಲಾದ ಅಕ್ಷರಗಳು ಎದ್ದು ಕಾಣುವಂತೆ ಕಪ್ಪು ಅಕ್ಷರದಲ್ಲಿ ಇರಬೇಕು. ಅಲೋಪತಿ ಚಿಕಿತ್ಸಾ ಪದ್ಧತಿ ಒದಗಿಸುವ ವೈದ್ಯಕೀಯ ಸಂಸ್ಥೆಗಳು ಆಕಾಶ ನೀಲಿ ಬಣ್ಣದ ಫಲಕ, ಆಯುಷ್ ಚಿಕಿತ್ಸಾ ಪದ್ಧತಿ ಅನುಸರಿಸುವ ಸಂಸ್ಥೆಗಳು ತಿಳಿ ಹಸಿರು ಬಣ್ಣದ ಫಲಕ ಬಳಕೆ ಮಾಡಬೇಕೆಂದು ತಿಳಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read