ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯದ ಅರಿವು ಮೂಡಿಸಲು ಗುಣಮಟ್ಟದ ಜೀವನ ಅನುಸರಣೆ ಆರೋಗ್ಯ ಬಗ್ಗೆ ಮಾಹಿತಿ ಸೇರ್ಪಡೆಗೆ ಚಿಂತನೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಏಮ್ಸ್ ರಿಷಿಕೇಶ್ ಮತ್ತು ಇಂಡಿಯನ್ ಪಾಲಿಸಿ ರಿಸರ್ಜ್ ಸಹಯೋಗದಲ್ಲಿ ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡ ಕುರಿತ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯದ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಪಠ್ಯಕ್ರಮದಲ್ಲಿ ಆಹಾರ, ಜೀವನ ಕ್ರಮ, ಶುಚಿತ್ವ, ಒಳ್ಳೆಯ ನಿದ್ದೆ ವ್ಯಾಯಾಮದ ಬಗ್ಗೆ ಪಠ್ಯ ಅಳವಡಿಸಲಾಗುವುದು. ಶಿಕ್ಷಣ ಇಲಾಖೆಯೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಶಾಲೆಗಳಲ್ಲಿಯೇ ಮಕ್ಕಳ ಆರೋಗ್ಯ ತಪಾಸಣೆ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.