ಮದುವೆಯಾದ ವಾರದೊಳಗೆ ಕೈ, ಕಾಲು ಊದಿಕೊಂಡು ಮೃತಮಟ್ಟ ವಧು

ಮದುವೆಯಾದ ವಾರದ ಬಳಿಕ ನವ ವಧುವಿನ ಮುಖ, ಕೈ ಊದಿಕೊಂಡು ವಧು ನಿಗೂಢವಾಗಿ ಸಾವನ್ನಪ್ಪಿರೋ ಘಟನೆ ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ನಡೆದಿದೆ.

ವಧುವನ್ನು 18 ವರ್ಷದ ಸಲೋನಿ ಎಂದು ಗುರುತಿಸಲಾಗಿದೆ. ಆಕೆ ಒಂದು ವಾರದ ಹಿಂದೆ ಮದುವೆಯಾಗಿದ್ದಳು. ಈ ವೇಳೆ ಮುಖ, ಕೈ ಕಾಲುಗಳ ಊತದಿಂದ ನರಳುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮಹಿಳೆಯನ್ನು ತುರ್ತು ನಿಗಾ ಘಟಕಕ್ಕೆ ಕಳಿಸಿದ್ದರು. ಆದರೆ ಆಕೆ ಬದುಕುಳಿಯಲಿಲ್ಲ.

ಮಹಿಳೆಯ ಮನೆಯವರಿಂದ ದೊರೆತ ಮಾಹಿತಿ ಪ್ರಕಾರ ಮೇ 6ರಂದು ಸಲೋನಿ ಮದುವೆಯಾಗಿದ್ದು, ಆಗಲೇ ಜ್ವರದಿಂದ ಬಳಲುತ್ತಿದ್ದರು. ಮದುವೆಯ ಎರಡು ದಿನಗಳ ನಂತರ ತನ್ನ ತಾಯಿಯ ಮನೆಗೆ ಹೋದಳು.

ಶನಿವಾರದಂದು ಆಕೆಯ ಪತಿ ವಿಕಾಸ್ ಮಂಡ್ಲೋಯ್ ಅವಳನ್ನು ತವರು ಮನೆಯಿಂದ ಮನೆಗೆ ಕರೆತಂದರು. ಮರುದಿನದಿಂದ ಸಲೋನಿಯ ಆರೋಗ್ಯವು ಹದಗೆಡಲು ಪ್ರಾರಂಭಿಸಿದ್ದು ಆಸ್ಪತ್ರೆ ಸೇರಿದ ಬಳಿಕ ಸಾವನ್ನಪ್ಪಿದಳು.

ಮಾಹಿತಿಯ ಪ್ರಕಾರ ಸಲೋನಿಯ ಅಜ್ಜಿಗೆ ಭಾನುವಾರ ಮಧ್ಯಾಹ್ನ ಸಲೋನಿಯ ಆರೋಗ್ಯ ಹದಗೆಟ್ಟಿರುವ ಬಗ್ಗೆ ಆಕೆಯ ಪತಿ ಮಾಹಿತಿ ನೀಡಿದ್ದಾರೆ. ಮುಖ, ಕೈ ಮತ್ತು ಕಾಲುಗಳಲ್ಲಿ ಊತವಿದೆ ಎಂದು ತಿಳಿಸಿದ್ದರು.

ಸುದ್ದಿ ತಿಳಿದ ಸಲೋನಿಯ ಸಹೋದರ ಆಕೆಯನ್ನು ಅತ್ತೆ ಮನೆಯಿಂದ ಕರೆತಂದು ಆಸ್ಪತ್ರೆಗೆ ಸೇರಿಸಿದ ಬಳಿಕ ಸಾವನ್ನಪ್ಪಿದ್ದಾಳೆ.

ಪೊಲೀಸರ ಪ್ರಕಾರ ತನಿಖೆ ಮುಂದುವರೆದಿದ್ದು ಮರಣೋತ್ತರ ಪರೀಕ್ಷೆಯ ವರದಿಯ ನಂತರ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read