‘ದಿ ಕೇರಳ ಸ್ಟೋರಿ’ ನೋಡಿದ ಜೋಡಿ: ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಬಲವಂತ ಆರೋಪ

ಇಂದೋರ್: ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಇಸ್ಲಾಂಗೆ ಮತಾಂತರಗೊಳಿಸುವಂತೆ ಆಕೆಯ ಮೇಲೆ ಒತ್ತಡ ಹೇರಿದ ಆರೋಪದಡಿ 23 ವರ್ಷದ ಫೈಜಾನ್ ಎಂಬಾತನನ್ನು ಬಂಧಿಸಲಾಗಿದ್ದು, ಈ ಮೂಲಕ ಮಧ್ಯಪ್ರದೇಶದ ಇಂದೋರ್‌ನಲ್ಲಿ ಧಾರ್ಮಿಕ ಮತಾಂತರದ ಹೊಸ ಘಟನೆ ಹೊರಬಿದ್ದಿದೆ.

ಇಸ್ಲಾಂಗೆ ಮತಾಂತರಗೊಳ್ಳುವಂತೆ ಲಿವ್-ಇನ್ ಪಾರ್ಟ್ನರ್ ಗೆ ಒತ್ತಾಯಿಸಿದ ಫೈಜಾನ್ ನನ್ನು ಬಂಧಿಸಲಾಗಿದೆ, ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ ನಂತರ ಯುವತಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ.

ಜೋಡಿ ಕಳೆದ 4-5 ತಿಂಗಳಿನಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಧರ್ಮವನ್ನು ಬದಲಾಯಿಸುವಂತೆ ಯುವತಿ ಮೇಲೆ ಒತ್ತಡ ಫೈಜಾನ್ ಹೇರುತ್ತಿದ್ದ, ಹಾಗಾಗಿ, ಮದುವೆಯಾಗಲು ಆಗಾಗ್ಗೆ ಅವರ ನಡುವೆ ವಾದ ವಿವಾದ ನಡೆಯುತ್ತಿದ್ದವು.

ಅವರು ಇತ್ತೀಚೆಗೆ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಹೋಗಿದ್ದರು. ನಂತರ ಅವರ ನಡುವೆ ವಾಗ್ವಾದ ನಡೆದು ಮೇ 19 ರಂದು ಯುವತಿ ಪೊಲೀಸರನ್ನು ಸಂಪರ್ಕಿಸಲು ಕಾರಣವಾಯಿತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆತ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಧರ್ಮ ಬದಲಾಯಿಸುವಂತೆ ಒತ್ತಾಯಿಸುತ್ತಿದ್ದ. ಇತ್ತೀಚೆಗೆ ಆತನೊಂದಿಗೆ “ದಿ ಕೇರಳ ಸ್ಟೋರಿ” ನೋಡಿದ್ದೇನೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಸಿನಿಮಾ ಮುಗಿದ ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಅಲ್ಲಿಂದ ಹೊರಡುವ ಮುನ್ನ ಆಕೆಗೆ ಫೈಜಾನ್ ಹೊಡೆದಿದ್ದಾನೆ. ಮೇ 19 ರಂದು ಪೊಲೀಸರ ಬಳಿ ಹೋಗಿ ಎಫ್‌ಐಆರ್ ದಾಖಲಿಸಿದ್ದಾಳೆ ಎಂದು ಅಧಿಕಾರಿ ವರ್ಮಾ ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಯುವತಿ ಆರೋಪಿಯನ್ನು ಭೇಟಿಯಾಗಿದ್ದಳು. ಮಹಿಳೆ ಉನ್ನತ ಶಿಕ್ಷಣ ಪಡೆದಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಈ ವ್ಯಕ್ತಿ 12ನೇ ತರಗತಿವರೆಗೆ ಓದಿದ್ದು, ನಿರುದ್ಯೋಗಿಯಾಗಿದ್ದಾನೆ. ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಎಲ್ಲಾ ಆರೋಪಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

https://twitter.com/ANI_MP_CG_RJ/status/1660817905444081669

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read