ಇಂದೋರ್: ಇಂದೋರ್-ಜಬಲ್ಪುರ್ ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳು ಮಧ್ಯಪ್ರದೇಶದ ಜಬಲ್ಪುರದಲ್ಲಿ ಶನಿವಾರ ಬೆಳಿಗ್ಗೆ 5:50 ಕ್ಕೆ ಹಳಿ ತಪ್ಪಿವೆ.ಇಂದೋರ್ ನಿಂದ ತೆರಳುತ್ತಿದ್ದ ರೈಲು ಜಬಲ್ಪುರ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 6 ಅನ್ನು ಸಮೀಪಿಸುತ್ತಿದ್ದಾಗ ಹಳಿ ತಪ್ಪಿದೆ.
ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಶ್ಚಿಮ ಮಧ್ಯ ರೈಲ್ವೆಯ ಸಿಪಿಆರ್ಒ ಹರ್ಷಿತ್ ಶ್ರೀವಾಸ್ತವ ಮಾತನಾಡಿ, “ರೈಲು ಇಂದೋರ್ನಿಂದ ಬರುತ್ತಿತ್ತು. ಜಬಲ್ಪುರ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 6 ರ ಕಡೆಗೆ ಹೋಗುತ್ತಿದ್ದಾಗ, ರೈಲು ನಿಧಾನವಾಗಿ ಚಲಿಸುತ್ತಿತ್ತು ಮತ್ತು 2 ಬೋಗಿಗಳು ಹಳಿ ತಪ್ಪಿದವು.
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮುಂಜಾನೆ ೫.೫೦ ರ ಸುಮಾರಿಗೆ ಈ ಘಟನೆ ನಡೆದಿದೆ. ಇದು ಪ್ಲಾಟ್ ಫಾರ್ಮ್ ನಿಂದ ಸುಮಾರು 150 ಮೀಟರ್ ದೂರದಲ್ಲಿ ಹಳಿ ತಪ್ಪಿದೆ.
https://twitter.com/i/status/1832243387543744628
https://twitter.com/ANI/status/1832242517825483050?ref_src=twsrc%5Etfw%7Ctwcamp%5Etweetembed%7Ctwterm%5E1832243387543744628%7Ctwgr%5E9fb186c9d5037bca6851c28be99a1b238690311c%7Ctwcon%5Es3_&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Fmode%3Dpwalaunch%3Dtrue