ಬೆಂಗಳೂರು : ಇಂಡಿಗೋ ವಿಮಾನಗಳ ಹಾರಾಟದಲ್ಲಿ ಚೇತರಿಕೆ ಕಂಡು ಬಂದಿದ್ದು, ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಇಂದು 58 ಫ್ಲೈಟ್ ಮಾತ್ರ ಕ್ಯಾನ್ಸಲ್ ಆಗಿದೆ.
ಹೌದು, ನಿನ್ನೆಗೆ ಹೋಲಿಸಿದರೆ ಇಂದು ರದ್ದಾದ ವಿಮಾನಗಳ ಸಂಖ್ಯೆ ಇಳಿಮುಖವಾಗಿದೆ. ನಿನ್ನೆ 120 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿತ್ತು, ಆದರೆ ಇಂದು 58 ವಿಮಾನಗಳ ಹಾರಾಟ ಮಾತ್ರ ಕ್ಯಾನ್ಸಲ್ ಆಗಿದೆ. ಈ ಮೂಲಕ ವಿಮಾನಗಳ ಹಾರಾಟದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ.
ಒಂದು ವಾರದಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವುಂಟಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿತ್ತು. ಸದ್ಯ ಇಂಡಿಗೋ ವಿಮಾನ ಸಂಚಾರ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಸಂಚಾರ ಕ್ರಮೇಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ವಿಮಾನ ಹಾರಾಟ ಭಾಗಶಃ ಸುಧಾರಿಸಿದ್ದು ಪ್ರಯಾಣಿಕರು ಕೊಂಚ ನಿರಾಳರಾಗಿದ್ದಾರೆ.
