BIG NEWS: ದೇಶದ ಎರಡನೇ ಸ್ವದೇಶಿ ನಿರ್ಮಿತ ಪರಮಾಣು ರಿಯಾಕ್ಟರ್ ಯಶಸ್ವಿ ಕಾರ್ಯಾರಂಭ

ನವದೆಹಲಿ: ದೇಶದ ಎರಡನೇ ಸ್ವದೇಶಿ ನಿರ್ಮಿತ ಪರಮಾಣು ರಿಯಾಕ್ಟರ್ ಗೆ ಗುಜರಾತ್ ನ ಕಕ್ರಪಾರ್ ಅಣು ವಿದ್ಯುತ್ ಸ್ಥಾವರದಲ್ಲಿ ಚಾಲನೆ ನೀಡಲಾಗಿದೆ.

700 ಮೆಗಾ ವ್ಯಾಟ್ ಸಾಮರ್ಥ್ಯದ ನ್ಯೂಕ್ಲಿಯರ್ ಪವರ್ ರಿಯಾಕ್ಟರ್ ಅಣು ವಿದ್ಯುತ್ ಸ್ಥಾವರ ಯಶಸ್ವಿಯಾಗಿ ಕಾರ್ಯಾರಂಭ ಮಾಡಿ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ನೂತನ ರಿಯಾಕ್ಟರ್ ನಾಲ್ಕನೇ ಘಟಕ 700 ಮೆಗಾ ವ್ಯಾಟ್ ಪೂರ್ಣ ಸಾಮರ್ಥ್ಯ ತಲುಪುವ ಮೊದಲು ಶೇಕಡ 90ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ನಡೆಸಲಿದೆ ಎಂದು ಭಾರತೀಯ ಅಣುಶಕ್ತಿ ನಿಗಮ ತಿಳಿಸಿದೆ.

2031- 32ರ ವೇಳೆಗೆ ಭಾರತ ಇದೇ ಮಾದರಿಯ 14,700 ಮೆಗಾ ವ್ಯಾಟ್ ಪರಮಾಣು ಶಕ್ತಿ ರಿಯಾಕ್ಟರ್ ಗಳ ಸ್ಥಾಪನೆಯ ಗುರಿ ಹೊಂದಿದೆ. ದೇಶದಲ್ಲಿ ಪ್ರಸ್ತುತ ಭಾರತೀಯ ಅಣು ಶಕ್ತಿ ನಿಗಮದ 24 ರಿಯಾಕ್ಟರ್ ಗಳು ಕಾರ್ಯಾಚರಿಸುತ್ತಿದ್ದು, 8180 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ.

ಭಾರತದ ಎರಡನೇ ಸ್ವದೇಶಿ ನಿರ್ಮಿತ 700 MW ಪರಮಾಣು ಶಕ್ತಿ ರಿಯಾಕ್ಟರ್ ಬುಧವಾರ ಗುಜರಾತ್‌ನ ಕಕ್ರಾಪರ್ ಪರಮಾಣು ವಿದ್ಯುತ್ ಕೇಂದ್ರದಲ್ಲಿ(KAPS) ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL) KAPS ನಲ್ಲಿ 4 ನೇ ಘಟಕವು 700 MW ಪೂರ್ಣ ಶಕ್ತಿಗೆ ಏರಿಸುವ ಮೊದಲು 90% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಥಾವರ ನಿರ್ವಾಹಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read