ಸಂಪತ್ತಿನಲ್ಲಿ ಬಾಲಿವುಡ್‌ ಸ್ಟಾರ್‌ ಗಳನ್ನೂ ಮೀರಿಸುತ್ತಾರೆ ದಕ್ಷಿಣದ ಈ ಹಾಸ್ಯ ನಟ ; ಅಚ್ಚರಿಗೊಳಿಸುತ್ತೆ ಇವರ ಆಸ್ತಿ !

ಭಾರತೀಯ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರದ್ದೇ ಒಂದು ದೊಡ್ಡ ಸಾಮ್ರಾಜ್ಯ. ಕಪಿಲ್ ಶರ್ಮಾ, ರಾಜು ಶ್ರೀವಾಸ್ತವ್, ಭಾರತಿ ಸಿಂಗ್, ಜಾನಿ ಲಿವರ್ ಹೀಗೆ ದೊಡ್ಡ ಪಟ್ಟಿಯೇ ಇದೆ. ಆದರೆ, ಈ ಎಲ್ಲರನ್ನು ಮೀರಿಸಿದ ಒಬ್ಬ ಹಾಸ್ಯ ಚಕ್ರವರ್ತಿ ತೆಲುಗು ಚಿತ್ರರಂಗದಲ್ಲಿದ್ದಾರೆ. ಅವರೇ ಬ್ರಹ್ಮಾನಂದಂ !

ತೆಲುಗು ಚಿತ್ರರಂಗದ ಹಾಸ್ಯ ಚಕ್ರವರ್ತಿ ಬ್ರಹ್ಮಾನಂದಂ, ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ. ಇವರ ಆಸ್ತಿ ಮೌಲ್ಯ ಬರೋಬ್ಬರಿ 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಬಾಲಿವುಡ್‌ನ ಸ್ಟಾರ್ ನಟರಾದ ರಣಬೀರ್ ಕಪೂರ್, ಪ್ರಭಾಸ್ ಗಿಂತಲೂ ಹೆಚ್ಚು.

ಬ್ರಹ್ಮಾನಂದಂ, ಆಂಧ್ರಪ್ರದೇಶದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಿಮಿಕ್ರಿ ಕಲೆಯ ಮೂಲಕ ರಂಗಭೂಮಿಯಲ್ಲಿ ಹೆಸರು ಮಾಡಿದ್ದು, 1985ರಲ್ಲಿ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. 1987ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು “ಆಹಾ ನಾ ಪೆಳ್ಳಂಟಾ !” ಚಿತ್ರವು ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. 90ರ ದಶಕದಲ್ಲಿ ಪ್ರತಿ ಎರಡನೇ ಅಥವಾ ಮೂರನೇ ತೆಲುಗು ಚಿತ್ರದಲ್ಲಿ ಬ್ರಹ್ಮಾನಂದಂ ಇದ್ದರು.

2012ರಲ್ಲಿ, ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಬ್ರಹ್ಮಾನಂದಂ ಪಡೆದರು. 2020ರ ವೇಳೆಗೆ, ಅವರು ಪ್ರೇಮ್ ನಜೀರ್ ಅವರ ದಾಖಲೆಯನ್ನು ಮುರಿದಿದ್ದು, 60ರ ವಯಸ್ಸಿನಲ್ಲೂ ಬ್ರಹ್ಮಾನಂದಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಬೇಡಿಕೆ ಇಂದಿಗೂ ಕಡಿಮೆಯಾಗಿಲ್ಲ.

ಕಪಿಲ್ ಶರ್ಮಾ ಅವರ ಆಸ್ತಿ ಮೌಲ್ಯ 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ, ಬ್ರಹ್ಮಾನಂದಂ ಅವರಷ್ಟು ಶ್ರೀಮಂತ ಹಾಸ್ಯನಟರು ಭಾರತದಲ್ಲಿ ಬೇರೆ ಯಾರೂ ಇಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read