ಒಂದೇ ಬಾರಿ 5 ಮಕ್ಕಳಿಗೆ ಜನ್ಮ ನೀಡಿದ ಮಹಾ ʼಮಾತೆʼ….!

ಜಾರ್ಖಂಡ್ ನಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ರಾಜಧಾನಿ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (RIMS) ಮಹಿಳೆಗೆ ಹೆರಿಗೆಯಾಗಿದೆ.

ಎಲ್ಲಾ ಐದು ಶಿಶುಗಳು ಆರೋಗ್ಯಕರ ಸ್ಥಿತಿಯಲ್ಲಿವೆ ಎಂದು ವರದಿಯಾಗಿದೆ. ಅವರನ್ನು ನಿಯೋನಾಟಲ್ ಇಂಟೆನ್ಸಿವ್ ಕೇರ್ ಯೂನಿಟ್‌ನಲ್ಲಿ (ಎನ್‌ಐಸಿಯು) ವೀಕ್ಷಣೆಗಾಗಿ ಇರಿಸಲಾಗಿದೆ.

ಚಟಾರ್‌ನ ಮಹಿಳೆಯೊಬ್ಬರು ರಿಮ್ಸ್ ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಟ್ವಿಟರ್‌ ಮೂಲಕ ಮಾಹಿತಿ ನೀಡಿದೆ.

“ಶಿಶುಗಳು NICU ನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿವೆ. ಡಾ. ಶಶಿ ಬಾಲಾ ಸಿಂಗ್ ಅವರ ನೇತೃತ್ವದಲ್ಲಿ ಯಶಸ್ವಿ ಹೆರಿಗೆಯನ್ನು ನಡೆಸಲಾಯಿತು” ಎಂದು ರಿಮ್ಸ್ ಹೇಳಿದೆ.

ನವಜಾತ ಶಿಶುಗಳು ಕಡಿಮೆ ತೂಕವನ್ನು ಹೊಂದಿದ್ದರೂ ಆರೋಗ್ಯ ಉತ್ತಮವಾಗಿದೆ. ಎಲ್ಲಾ ಐದು ಶಿಶುಗಳು ಮತ್ತು ಅವರ ತಾಯಿಯನ್ನು ಪ್ರಸ್ತುತ ವೈದ್ಯರ ತಂಡವು ಮೇಲ್ವಿಚಾರಣೆ ಮಾಡುತ್ತಿದೆ.

ಒಂದೇ ಬಾರಿಗೆ ಜನಿಸಿದ ಐದು ಮಕ್ಕಳನ್ನು ಕ್ವಿಂಟಿಪ್ಲೆಟ್ಸ್ ಎಂದು ಕರೆಯಲಾಗುತ್ತದೆ. 55 ಮಿಲಿಯನ್ ಜನನಗಳಲ್ಲಿ 1 ರಲ್ಲಿ ಕ್ವಿಂಟಪ್ಲೆಟ್ಸ್ ಸ್ವಾಭಾವಿಕವಾಗಿ ಸಂಭವಿಸುತ್ತವೆ. ಮೊದಲ ಕ್ವಿಂಟಪ್ಲೆಟ್‌ಗಳು 1934 ರಲ್ಲಿ ಜನಿಸಿದ ಕೆನಡಾದ ಡಿಯೋನೆ ಕ್ವಿಂಟ್‌ಪ್ಲೆಟ್‌ಗಳಾಗಿವೆ. ಆಗ ಒಂದೇ ರೀತಿಯ 5 ಹೆಣ್ಣುಮಕ್ಕಳು ಜನಿಸಿದ್ದು ಆರೋಗ್ಯವಾಗಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read