ಪೂರ್ವ ಲಂಡನ್ನಲ್ಲಿರುವ ಭಾರತೀಯ ರೆಸ್ಟೋರೆಂಟ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐದು ಜನರಿಗೆ ಗಂಭೀರ ಗಾಯಗಳಾಗಿವೆ. 15 ವರ್ಷದ ಬಾಲಕ ಮತ್ತು 54 ವರ್ಷದ ವ್ಯಕ್ತಿಯನ್ನು ಬೆಂಕಿ ಹಚ್ಚಿದ ಆರೋಪದ ಮೇಲೆ ಬಂಧಿಸಲಾಗಿದೆ.
ಶುಕ್ರವಾರ ರಾತ್ರಿ ಇಲ್ಫೋರ್ಡ್ನಲ್ಲಿರುವ ಇಂಡಿಯನ್ ಅರೋಮಾ ರೆಸ್ಟೋರೆಂಟ್ ನಲ್ಲಿ ಘಟನೆ ನಡೆದಿದ್ದು, ಊಟ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸುಟ್ಟಗಾಯಗಳಿಗೆ ಒಳಗಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಲಂಡನ್ ಆಂಬ್ಯುಲೆನ್ಸ್ ಸೇವೆಯ ಅರೆವೈದ್ಯರು ಸ್ಥಳದಲ್ಲೇ ಚಿಕಿತ್ಸೆ ನೀಡಿದ್ದಾರೆ. ಪೊಲೀಸರ ಪ್ರಕಾರ, ಒಬ್ಬ ಪುರುಷ ಮತ್ತು ಮಹಿಳೆ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.
ನಾವು ಇಬ್ಬರನ್ನು ಬಂಧಿಸಿದ್ದು, ನಮ್ಮ ತನಿಖೆ ವೇಗದಲ್ಲಿ ಮುಂದುವರೆದಿದೆ ಎಂದು ಮೆಟ್ ಪೊಲೀಸರ ಕೇಂದ್ರ ತಜ್ಞ ಅಪರಾಧ ಉತ್ತರ ಘಟಕದ ಡಿಟೆಕ್ಟಿವ್ ಚೀಫ್ ಇನ್ಸ್ಪೆಕ್ಟರ್ ಮಾರ್ಕ್ ರೋಜರ್ಸ್ ಹೇಳಿದ್ದಾರೆ.
ಜೀವಕ್ಕೆ ಅಪಾಯವನ್ನುಂಟುಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿದ ಶಂಕೆಯ ಮೇಲೆ ಇಬ್ಬರೂ ಶಂಕಿತರನ್ನು ಬಂಧಿಸಲಾಗಿದೆ ಮತ್ತು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಬೆಂಕಿಯಿಂದ ರೆಸ್ಟೋರೆಂಟ್ಗೆ ವ್ಯಾಪಕ ಹಾನಿಯಾಗಿದೆ. ಶುಕ್ರವಾರ ರಾತ್ರಿ ಜೋರಾಗಿ ಕಿರುಚಾಟ ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ದಾಳಿಕೋರರು ಮುಸುಕು ಧರಿಸಿ ಊಟದ ಸ್ಥಳಕ್ಕೆ ಬೆಂಕಿ ಹಚ್ಚಿದ್ದಾರೆ.
ರೆಸ್ಟೋರೆಂಟ್ ಅನ್ನು ರೋಹಿತ್ ಕಲುವಾಲಾ ನಿರ್ವಹಿಸುತ್ತಿದ್ದಾರೆ ಮತ್ತು ಭಾರತದ ಸ್ವಾದಿಷ್ಟ ಆಹಾರ ತಲುಪಿಸಲು ತಾವು ಸಮರ್ಪಿತ ಎಂದು ಹೇಳಿಕೊಂಡಿದ್ದಾರೆ.