BREAKING : Asian Games 2023 : ಇರಾನ್ ಮಣಿಸಿ ಚಿನ್ನ ಗೆದ್ದ ಭಾರತದ ಪುರುಷರ ಕಬಡ್ಡಿ ತಂಡ

ಇರಾನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಕಬಡ್ಡಿ ತಂಡ ಚಿನ್ನದ ಪದಕ ಗೆದ್ದಿದೆ.
ಭಾರತ 33-29 ಅಂಕಗಳಿಂದ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.

ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಮತ್ತೆ ಭಾರತ ಚಿನ್ನದ ಬೇಟೆ ಮುಂದುವರೆಸಿದೆ.

2023 ರ ಆವೃತ್ತಿಯು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಆವೃತ್ತಿ ಮಾತ್ರವಲ್ಲ, ಭಾರತವು ಪದಕ ಪಟ್ಟಿಯಲ್ಲಿ ಮೂರು ಅಂಕಿಯ ಗಡಿಯನ್ನು ಮುಟ್ಟುತ್ತಿರುವುದು ಇದೇ ಮೊದಲು. ಈ ಹಿಂದೆ 2018ರಲ್ಲಿ ಭಾರತ 70 ಪದಕಗಳನ್ನು ಜಯಿಸಿತ್ತು. ಒಟ್ಟು 100 ಪದಕಗಳನ್ನು ಗೆದ್ದಿರುವ ಭಾರತ ಹೊಸ ಇತಿಹಾಸ ನಿರ್ಮಿಸಿದೆ.

https://twitter.com/Media_SAI/status/1710587415084343313

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read