8 ತಿಂಗಳ ಹಿಂದೆ ನಾಪತ್ತೆಯಾಗಿದ್ದವನಿಗೆ 7 ತಿಂಗಳ ಹಿಂದೆ ಅಂತ್ಯಕ್ರಿಯೆ; ಮತ್ತೆ ಜೀವಂತವಾಗಿ ಪತ್ತೆ

ಎಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ಕೇರಳದ ವ್ಯಕ್ತಿ ಏಳು ತಿಂಗಳ ಹಿಂದೆ ಸತ್ತು‌ ಹೋಗಿದ್ದಾನೆಂದು ನಂಬಲಾಗಿತ್ತು. ಆದ್ರೆ ಆತ ಗೋವಾದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ.

ಕಳೆದ ಏಳು ತಿಂಗಳುಗಳಲ್ಲಿ ಆ ವ್ಯಕ್ತಿ ಉತ್ತರ ಭಾರತದ ಸುಂದರ ಪಟ್ಟಣ ಶಿಮ್ಲಾಕ್ಕೆ ಪ್ರಯಾಣಿಸಿದ್ದರು. ಪಂಜಾಬ್, ದೆಹಲಿ, ಮುಂಬೈ ಮತ್ತು ಮಧ್ಯಪ್ರದೇಶದ ಮೂಲಕ ಪ್ರಯಾಣಿಸಿದ ಕೇರಳದ ದೀಪಕ್ ಗೋವಾದ ಬೊಗ್ಮಾಲೋ ಬೀಚ್‌ನಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಗವೊಂದರಲ್ಲಿನ ಹೋಟೆಲ್‌ ಪರಿಶೀಲಿಸಿದಾಗ ಅವರು ಪತ್ತೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳ ಪೊಲೀಸ್ ಕ್ರೈಂ ಬ್ರಾಂಚ್ ಅಧಿಕಾರಿಗಳ ಪ್ರಕಾರ 7 ತಿಂಗಳ ಹಿಂದೆ ದೀಪಕ್ ಅವರನ್ನು ಮನೆಗೆ ಕರೆತರಲು ಗೋವಾ ತಲುಪಿದಾಗ ಅವನ ಕುಟುಂಬವು ಕೇರಳದ ಕೊಯಿಲಾಂಡಿ ಕಡಲತೀರದಲ್ಲಿ ಆತ ಕಣ್ಮರೆಯಾದ ಹತ್ತು ದಿನಗಳ ನಂತರ ಪತ್ತೆಯಾದ ಶವವನ್ನು ತಮ್ಮ ಮಗನೆಂದು ಗುರುತಿಸಿ ಅಂತಿಮ ವಿಧಿಗಳನ್ನು ನೆರವೇರಿಸಿತ್ತು. ಆದರೆ ಡಿಎನ್‌ಎ ಪರೀಕ್ಷೆಯಲ್ಲಿ ಶವವು ದೀಪಕ್‌ನದ್ದಲ್ಲ ಎಂಬುದು ಸಾಬೀತಾಗಿತ್ತು.

ಇದೀಗ ಪತ್ತೆಯಾಗಿರುವ ವ್ಯಕ್ತಿಯನ್ನು 36 ವರ್ಷದ ದೀಪಕ್ ಎಂದು ಗುರುತಿಸಲಾಗಿದ್ದು, ಕೋಝಿಕ್ಕೋಡ್‌ನ ಮೆಪ್ಪಯೂರ್ ನಿವಾಸಿಯಾಗಿದ್ದಾರೆ. ಅವರು ಜುಲೈ 7, 2022 ರಂದು ತಮ್ಮ ಮನೆಯಿಂದ ಕಾಣೆಯಾದ ಬಳಿಕ ತಿಂಗಳುಗಳವರೆಗೆ ಪತ್ತೆಯಾಗಿರಲಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read