ಫಿಲಿಪೈನ್ಸ್ ನಲ್ಲಿ ಪಂಜಾಬ್ ಮೂಲದ ಕಬಡ್ಡಿ ತರಬೇತುದಾರನ ಹತ್ಯೆ

ಪಂಜಾಬ್ ಮೂಲದ ಕಬಡ್ಡಿ ತರಬೇತುದಾರ ಗುರುಪ್ರೀತ್ ಸಿಂಗ್ ಗಿಂಡ್ರು ಅವರನ್ನು ಮಂಗಳವಾರ ಫಿಲಿಪೈನ್ಸ್ ನ ರಾಜಧಾನಿ ಮನಿಲಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮನಿಲಾ ಪೊಲೀಸರು ತಿಳಿಸಿದ್ದಾರೆ

ಪಂಜಾಬ್‌ನ ಮೋಗಾದ 43 ವರ್ಷದ ಕಬಡ್ಡಿ ತರಬೇತುದಾರ ಗುರುಪ್ರೀತ್ ಸಿಂಗ್ ಗಿಂಡ್ರು ನಾಲ್ಕು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಫಿಲಿಪೈನ್ಸ್ ಗೆ ಸ್ಥಳಾಂತರಗೊಂಡಿದ್ದರು. ಅವರು ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಅಪರಿಚಿತ ದುಷ್ಕರ್ಮಿಗಳು ಮನೆಗೆ ನುಗ್ಗಿ ತಲೆಗೆ ಗುಂಡು ಹಾರಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳಿಗೆ ಮನಿಲಾ ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, ದಾಳಿಕೋರರನ್ನು ಹೆಸರಿಸಲಾಗಿಲ್ಲ ಮತ್ತು ಕಬಡ್ಡಿ ತರಬೇತುದಾರ ಗುರುಪ್ರೀತ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಕಾರಣ ಪತ್ತೆಯಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read