ಕೇವಲ 90 ಸಾವಿರ ರೂ. ಖರ್ಚಿನಲ್ಲಿ 11 ದಿನಗಳ ಕಾಲ ಸ್ವಿಟ್ಜರ್ಲೆಂಡ್‌ ಪ್ರವಾಸ ಕೈಗೊಂಡ ಕುಟುಂಬ; ಇಲ್ಲಿದೆ ಅವರು ನೀಡಿರುವ ಟಿಪ್ಸ್

ಭಾರತೀಯ ಮೂಲದ ಚಾರ್ಟೆಡ್ ಅಕೌಂಟೆಂಟ್ 11 ದಿನದ ಪ್ರವಾಸದಲ್ಲಿ ಸ್ವಿಡ್ಜರ್ಲೆಂಡ್ ನ 25 ಪಟ್ಟಣಗಳಿಗೆ ಕುಟುಂಬವನ್ನು ಕೇವಲ 90 ಸಾವಿರ ರೂ. ವೆಚ್ಚದಲ್ಲಿ ಕರೆದೊಯ್ದಿದ್ದಾರೆ. ಅತಿ ಕಡಿಮೆ ಬೆಲೆಯಲ್ಲಿ ಸ್ವಿಟ್ಜರ್ಲೆಂಡ್ ಪ್ರವಾಸ ಮಾಡಿರುವ ಇವರ ಪ್ರವಾಸ ಕಥನ ವೈರಲ್ ಆಗಿದೆ.

ಸಿಎ ಮೆಹುಲ್ ಶಾ ಎಂಬುವವರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸ್ವಿಸ್ ಪ್ರಯಾಣ ವ್ಯವಸ್ಥೆಯನ್ನು ಬಳಸಿಕೊಂಡು ಇಬ್ಬರು ವಯಸ್ಕರು ಮತ್ತು 2 ಮಕ್ಕಳು ಸೇರಿದಂತೆ 90 ಸಾವಿರ ರೂ. ಒಟ್ಟು ಬೆಲೆಯಲ್ಲಿ 4 ದೋಣಿ ಪ್ರಯಾಣ ಸೇರಿದಂತೆ 11 ದಿನಗಳಲ್ಲಿ ನಾವು 25 ಕ್ಕೂ ಹೆಚ್ಚು ಪಟ್ಟಣಗಳೊಂದಿಗೆ ಸ್ವಿಟ್ಜರ್ಲೆಂಡ್‌ಗೆ ಪ್ರಯಾಣಿಸಿದ್ದೇವೆ; ಯಾವುದೇ ಟ್ರಾವೆಲ್ ಏಜೆನ್ಸಿ ನಿಮ್ಮನ್ನು ಈ ಮಾರ್ಗದಲ್ಲಿ ಕರೆದೊಯ್ಯುವುದಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.

ಎರಡು ಮಕ್ಕಳ ತಂದೆಯಾದ ನಾನು ಹದಿನಾರು ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ 45,000 ರೂ. ಗೆ ಇಬ್ಬರು ವಯಸ್ಕರ 15 ದಿನಗಳ ಸ್ವಿಸ್ ಪ್ರಯಾಣದ ಟಿಕೆಟ್‌ಗಳನ್ನು ಮತ್ತು ಫ್ಯಾಮಿಲಿ ಕಾರ್ಡ್ ಅನ್ನು ಸ್ವೀಕರಿಸಿದ್ದೇನೆ ಎಂದಿದ್ದಾರೆ. ಮೂರು ದಿನಗಳ ಕಾಲ ಲೌಸನ್ನೆಯಲ್ಲಿದ್ದ ಅವರು ಬಳಿಕ ಗಸ್ಟಾಡ್ ಗೆ ಪ್ರಯಾಣಿಸಿದ್ದಾರೆ.

ಸ್ವಿಸ್ ಪಾಸ್ ಬಳಸಿಕೊಂಡು ರಮಣೀಯ ಮಾರ್ಗವಾದ ಮಾಂಟ್ರೀಕ್ಸ್ ನಿಂದ ಪನೋರಮಿಕ್ ಗೋಲ್ಡನ್‌ಪಾಸ್ ರೈಲನ್ನು ಹತ್ತಿ ಲೌಸಾನ್ನೆಯಲ್ಲಿನ ಒಲಿಂಪಿಕ್ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. 4 ನೇ ದಿನದಂದು ಮೈರೆಂಗೆನ್‌ಗೆ ತೆರಳಿದ್ದಾರೆ. ಅದೇ ದಿನ, ಕುಟುಂಬವು ಲೇಕ್ ಬ್ರಿಯೆಂಜ್‌ನಿಂದ ಇಂಟರ್‌ಲೇಕನ್‌ಗೆ ಮತ್ತೊಂದು ದೋಣಿಯಲ್ಲಿ ತೆರಳಿದ್ದಾರೆ, ಸ್ವಿಸ್ ಫೆಡರಲ್ ರೈಲ್ವೇಸ್ ನಲ್ಲಿ ಲಗೇಜ್ ದರ ಕಡಿಮೆಯಿದ್ದು ನೀವು ಯಾವುದೇ ಹೋಟೆಲ್ ಚೆಕ್ ಇನ್ ಅಥವಾ ಚೆಕ್ ಔಟ್ ಮಾಡುವಾಗ, ನಗರವನ್ನು ಬದಲಾಯಿಸುವಾಗ ರೈಲಿನ ಮೂಲಕ ಅನೇಕ ಸಣ್ಣ ಪಟ್ಟಣಗಳಿಗೆ ಭೇಟಿ ನೀಡಬಹುದು ಎಂದಿದ್ದಾರೆ.

ನಂತರ ಮೆಹುಲ್ ಶಾ ಕುಟುಂಬವು ಹೇಳಿಕೊಳ್ಳುವಂತಹ ಪ್ರವಾಸೋದ್ಯಮ ಸ್ಥಳವಲ್ಲದಿದ್ದರೂ ಹೆಚ್ಚು ಸುಂದರವಾದ ಪರ್ವತ ಮನ್ಲಿಚೆನ್ ಗೆ ತೆರಳಿದೆ. ರೈಲು ಮತ್ತು ಕೇಬಲ್ ಕಾರ್ ಪ್ರಯಾಣದಲ್ಲಿ 4 ಜನರ ಕುಟುಂಬಕ್ಕೆ ಒಟ್ಟು ವೆಚ್ಚ ಕೇವಲ 7,000 ರೂ.ನಲ್ಲಿ ಅಂದಿನ ಪ್ರಯಾಣ ಮುಗಿಸಿದ್ದಾರೆ.

ಮೆಹುಲ್ ಷಾ ಮತ್ತು ಕುಟುಂಬವು ತಮ್ಮ ಪ್ರವಾಸದ 6 ನೇ ದಿನದಂದು ಬರ್ನ್‌ಗೆ ರೈಲಿನಲ್ಲಿ ತೆರಳಿದೆ. ಇಲ್ಲಿ ಗಡಿಯಾರದ ಗೋಪುರ, ಹಳೆ ನಗರದ ಮಧ್ಯಭಾಗದಲ್ಲಿರುವ ಕ್ರಾಮ್ಗಾಸ್ಸೆ ಮತ್ತು ಗೆರೆಚ್ಟಿಗ್ಕೀಟ್ಸ್ಗಾಸ್ಸೆಯ ಎರಡು ಪ್ರಮುಖ ಶಾಪಿಂಗ್ ಬೀದಿಗಳು ಇವೆ. ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಪರಂಪರೆಯ ತಾಣವಾಗಿರುವ ಇಲ್ಲಿ ಶಾಪಿಂಗ್ ಅನುಭವವನ್ನು ಆನಂದಿಸಬಹುದೆಂದಿರುವ ಮೆಹುಲ್ ಇದು ಸಹಾ ಸ್ವಿಸ್ ಪಾಸ್‌ನೊಂದಿಗೆ ಮತ್ತೆ ಉಚಿತವಾಗಿದೆ ಎಂದಿದ್ದಾರೆ.

ಒಂದು ಗಂಟೆಯ ಕಾಲ ಲುಜೆರ್ನ್‌ಗೆ ರೈಲಿನಲ್ಲಿ ತೆರಳಿ. ಪಿಯರ್ 1 ರಿಂದ ವಿಟ್ಜ್ನೌಗೆ ಒಂದು ಗಂಟೆಯ ಕಾಲ ಪ್ರಯಾಣಕ್ಕಾಗಿ ಸುಂದರವಾದ ದೋಣಿ ವಿಹಾರವನ್ನು ಆಯ್ಕೆ ಮಾಡಿ. ಯೂರೋಪಿನ ಅತ್ಯಂತ ಹಳೆಯ ಕಾಗ್‌ವೀಲ್ ರೈಲ್ವೇ ಹತ್ತಿ ಮೌಂಟ್ ರಿಗಿಯನ್ನು 40 ನಿಮಿಷಗಳಲ್ಲಿ ತಲುಪಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಎಂದಿದ್ದಾರೆ. ಭಾರತೀಯ ಆಹಾರ ಪದ್ಧತಿಯ ಖಾದ್ಯ, ಊಟವೂ ಸಹ ಸಿಗುತ್ತದೆ. ಅಷ್ಟೇ ಅಲ್ಲದೇ ನಾವು ತರಕಾರಿ ಕೊಂಡು ಒಂದು ಹೊತ್ತಿಗೆ ಅಡಿಗೆ ಸಹ ಮಾಡಿಕೊಂಡು ಖರ್ಚು ಉಳಿಸಬಹುದು ಎಂದು ಟಿಪ್ಸ್ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read