ಅಮೆರಿಕಕ್ಕೆ ಸಿಗದ ವೀಸಾ: ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಟ್ವೀಟ್​

ನವದೆಹಲಿ: ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಶಾಶ್ವತ್ ದಲಾಲ್ ಅವರು ವಿಶ್ವ ಚಾಂಪಿಯನ್‌ಶಿಪ್‌ನ ಸಮಯದಲ್ಲಿ ಅಮೆರಿಕದ ವೀಸಾವನ್ನು ಪಡೆಯಲು ಸಾಧ್ಯವಾಗದಿರುವ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಅವರ ಪ್ರಭಾವಶಾಲಿ ಶ್ರೇಯಾಂಕಗಳು, ಶಿಕ್ಷಣ ಮತ್ತು ಚಾಂಪಿಯನ್‌ಶಿಪ್​ ಹೊರತಾಗಿಯೂ, ದಲಾಲ್ ಅವರು ಸೆಪ್ಟೆಂಬರ್ 2023 ಕ್ಕೆ ನಿಗದಿಪಡಿಸಲಾದ ಪಂದ್ಯಕ್ಕೆ ಹೋಗಲು ಆಗುತ್ತಿಲ್ಲ.

ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಅನೇಕ ಬಳಕೆದಾರರು ಇವರಿಗೆ ತಮ್ಮ ಬೆಂಬಲವನ್ನು ತೋರಿಸುತ್ತಿದ್ದಾರೆ ಮತ್ತು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವರು ಸಮಯಕ್ಕೆ ಅಗತ್ಯವಾದ ವೀಸಾವನ್ನು ಪಡೆಯಬಹುದು ಎಂದು ಆಶಿಸುತ್ತಿದ್ದಾರೆ.

ದಲಾಲ್ ಅವರು ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ ಮತ್ತು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿಯನ್ನು ಪಡೆದಿರುವ ವಿದ್ಯಾರ್ಥಿ. ಅವರು ವಿವಿಧ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ಅವರ ಪ್ರಸ್ತುತ ವಿಶ್ವ ಶ್ರೇಯಾಂಕವು ಪುರುಷರ ಸಿಂಗಲ್ಸ್‌ನಲ್ಲಿ 382 ಆಗಿದೆ. ಇದರ ಹೊರತಾಗಿಯೂ ಅವರಿಗೆ ವೀಸಾ ಸಿಗುತ್ತಿಲ್ಲ. ಆದ್ದರಿಂದ ಸಮಸ್ಯೆಗೆ ಪರಿಹಾರವನ್ನು ಒದಗಿಸಲು ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದು, ಹಲವಾರು ರೀತಿಯ ಸಲಹೆಗಳು ಬರುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read