ವಿಶ್ವಕಪ್ ಕಬಡ್ಡಿ ಕಿರೀಟ ಮುಡಿಗೇರಿಸಿಕೊಂಡ ಭಾರತ ಮಹಿಳಾ ತಂಡ: ಮೋದಿ ಅಭಿನಂದನೆ

ನವದೆಹಲಿ: ಭಾರತ ಮಹಿಳಾ ಅಂಧರ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ಮಹಿಳಾ ಕಬಡ್ಡಿ ತಂಡ ಕೂಡ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮೂಲಕ ದೇಶದ ನಾರಿ ಶಕ್ತಿ ಮತ್ತೆ ಅನಾವರಣಗೊಂಡಿದೆ.

ಕಳೆದ ಎರಡು ತಿಂಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಹಿಳೆಯರು ಸರಣಿ ಟ್ರೋಫಿಗಳ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಬಾಂಗ್ಲಾದೇಶದ ಢಾಕಾದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 35 -28 ಅಂಕಗಳಿಂದ ಚೈನಿಸ್ ತೈಪೇ ತಂಡವನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.

ಈ ಬಾರಿಯ ಕಬಡ್ಡಿ ವಿಶ್ವಕಪ್ ಚಾಂಪಿಯನ್ ತಂಡದಲ್ಲಿ ರಾಜ್ಯದ ಇಬ್ಬರು ಆಟಗಾರ್ತಿಯರು ಇದ್ದರು. ಸುರತ್ಕಲ್ ನ ಧನಲಕ್ಷ್ಮಿ ತಂಡದ ಭಾಗವಾಗಿದ್ದರೆ, ಪ್ರಧಾನ ಕೋಚ್ ತೇಜಸ್ವಿನಿ ಬಾಯಿ ತರಬೇತಿ ನೀಡಿದ್ದಾರೆ.

11 ದೇಶಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಭಾರತ ಫೈನಲ್ ನಲ್ಲಿ ಜಯಗಳಿಸಿದೆ. ಭಾರತ ಕಬಡ್ಡಿ ಮಹಿಳಾ ಕಬ್ಬಡಿ ತಂಡದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಹಲವು ಗಣ್ಯರು ಅಭಿನಂದಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read