ನವದೆಹಲಿ: ಪಾಕಿಸ್ತಾನ ಸೇನೆ ಮತ್ತೆ ಕಾಲು ಕೆದರಿ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಭಾರತದ 26 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಮತ್ತೆ ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನದ ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಶ್ರೀನಗರ, ಜಮ್ಮು, ಫಿರೋಜ್ ಪುರ, ಪಠಾಣ್ ಕೋಟ್, ಜೈಸಲ್ಮಾರ್, ಬರ್ಮನ್, ಭುಜ್ ಸೇರಿದಂತೆ 26 ಸ್ಥಳಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನದ ಡ್ರೋನ್ ದಾಳಿಯಲ್ಲಿ ಫಿರ್ಜ್ ಪುರದಲ್ಲಿ ಮನೆಗೆ ಹಾನಿಯಾಗಿದೆ. ಜಮ್ಮು-ಕಾಶ್ಮೀರ, ಪಂಜಾಬ್ ನ ಕೆಲವೆಡೆ ಡ್ರೋನ್ ದಾಳಿಗೆ ಬೆಂಕಿ ಹೊತ್ತಿಕೊಂಡಿದೆ.
ಪಾಕಿಸ್ತಾನದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ನಾಲ್ಕು ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ.
ಪಾಕಿಸ್ತಾನದ ರಾವಲ್ಪಿಂಡಿ, ಚೆಕ್ವಾಲ್, ಶೋರ್ ಕೋಟ್, ರಹೀಮ್ ಯಾರ್ ಖಾನ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದು, ನಾಲ್ಕು ವಾಯುನೆಲೆಗಳು ಧ್ವಂಸಗೊಂಡಿವೆ.