ಇಸ್ಲಾಮಾಬಾದ್: ಸಿಂಧೂ ನದಿ ನೀರು ನಿಲ್ಲಿಸಿದರೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ. ಸಿಂಧೂ ನದಿ ನೀರು ನಿಲ್ಲಿಸಿದರೆ ನಾವು ಯುದ್ಧಕ್ಕೆ ಸಿದ್ದ ಎಂದು ಭಾರತಕ್ಕೆ ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸ್ ಎಚ್ಚರಿಕೆ ನೀಡಿದ್ದಾರೆ.
ಘೋರಿ, ಘಜಿನಿ, ಶಾಹೀನ್ ಕ್ಷಿಪಣಿಗಳನ್ನು ಭಾರತಕ್ಕೆ ಮಾತ್ರವೇ ಇರಿಸಲಾಗಿದೆ ಎಂದು ಬೆದರಿಕೆ ಮಾತನಾಡಿದ್ದಾರೆ. ಭಾರತ ನೀರು ಸರಬರಾಜು ನಿಲ್ಲಿಸುವ ಧೈರ್ಯ ಮಾಡಿದರೆ ಪೂರ್ಣ ಪ್ರಮಾಣದಲ್ಲಿ ಯುದ್ದಕ್ಕೆ ಸಿದ್ಧವಾಗಬೇಕು. ನಾನು ಜವಾಬ್ದಾರಿಯುತ ಸಚಿವನಾಗಿ ಹೇಳುತ್ತಿದ್ದೇನೆ. ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ. ಅವು ದೇಶಾದ್ಯಂತ ಅಡಗಿಕೊಂಡಿವೆ. ಪ್ರಚೋದಿಸಿದರೆ ದಾಳಿ ಮಾಡುವುದಕ್ಕೂ ಸಿದ್ಧವಾಗಿವೆ. ಅವುಗಳನ್ನು ಹಿಂದೂಸ್ತಾನಕ್ಕಾಗಿಯೇ ಇರಿಸಿದ್ದೇವೆ ಎಂದಿದ್ದಾರೆ.
ನಮಗೆ ನೀರು ಸರಬರಾಜು ನಿಲ್ಲಿಸಿದರೆ ನಮ್ಮಲ್ಲಿರುವ 136 ಸಿಡಿತಲೆಗಳನ್ನು ನಾವು ಬಳಸುತ್ತೇವೆ. ಪ್ರದರ್ಶನಕ್ಕೆ ಕ್ಷಿಪಣಿ ತಯಾರಿಸಿ ಇಟ್ಟಿಲ್ಲ. ಇದು ಜಗತ್ತಿಗೂ ಗೊತ್ತಿದೆ. ನಿಮಗೂ ಗೊತ್ತಿದೆ. ನೀರು ನಿಲ್ಲಿಸಿದರೆ ನಿಮ್ಮ ಉಸಿರು ನಿಲ್ಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.