ವಾಹನ ಸಂಚಾರದಲ್ಲಿ ನಿಧಾನಗತಿ; ಇಲ್ಲಿದೆ ವಿಶ್ವದ ಟಾಪ್ 10 ರಾಷ್ಟ್ರಗಳ ಪಟ್ಟಿ

ಮನಿಬಾರ್ನ್, ಬ್ರಿಟಿಷ್ ಕಾರ್ ಫೈನಾನ್ಸ್ ಮತ್ತು ಲೋನ್ ಕಂಪನಿಯು ಇತ್ತೀಚೆಗೆ ವಿಶ್ವದ ಟಾಪ್ 10 ನಿಧಾನಗತಿಯ ವಾಹನ ಸಂಚಾರದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಸಂಶೋಧಕರು ಸರಾಸರಿ ದಟ್ಟಣೆ ಮಟ್ಟ, ರಸ್ತೆ ಗುಣಮಟ್ಟ, ವೇಗಮಿತಿ ಸೇರಿದಂತೆ ಹಲವಾರು ಅಂಶಗಳ ಆಧಾರದ ಮೇಲೆ ಪ್ರತಿ ದೇಶಕ್ಕೆ ಅಂಕಗಳನ್ನು ನಿಗದಿಪಡಿಸಿದ್ದಾರೆ.

ಟಾಪ್ 10 ರಲ್ಲಿ 6.46 ರ ನಿಧಾನ ಟ್ರಾಫಿಕ್ ಸ್ಕೋರ್ ಹೊಂದಿರುವ ಒಟ್ಟು 49 ದೇಶಗಳಲ್ಲಿ ಭಾರತವು ವಿಶ್ವದ 10 ನೇ ನಿಧಾನಗತಿಯ ರಾಷ್ಟ್ರವಾಗಿದೆ. ಭಾರತದ ದಟ್ಟಣೆ ಮಟ್ಟದ ಸ್ಕೋರ್ ಶೇ. 48 ಮತ್ತು ರಸ್ತೆ ಗುಣಮಟ್ಟದ ಸ್ಕೋರ್ 7 ರಲ್ಲಿ 4.5 ಅಂಕಗಳನ್ನು ಪಡೆದುಕೊಂಡಿದೆ. ಮೊದಲನೆಯ ಸ್ಥಾನ ಪೆರು ಪಡೆದುಕೊಂಡಿದೆ. ಇದು 10 ರಲ್ಲಿ 8.45 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ.

ರೊಮೇನಿಯಾ ಮತ್ತು ಇಸ್ರೇಲ್ ಅನುಕ್ರಮವಾಗಿ 7.83 ಮತ್ತು 7.35 ರ ನಿಧಾನ ಸಂಚಾರ ಸ್ಕೋರ್‌ನೊಂದಿಗೆ ಪಟ್ಟಿಯಲ್ಲಿರುವ ಇತರ ಎರಡು ದೇಶಗಳಾಗಿವೆ.

ಇನ್ನು ವಿಶ್ವದ ದೊಡ್ಡಣ್ಣ ಅಮೆರಿಕ, ದಟ್ಟಣೆಯ ವಿಷಯದಲ್ಲಿ ವಿಶ್ವದ ಅತ್ಯಂತ ವೇಗದ ದೇಶವೆಂದು ಕಂಡುಬಂದಿದೆ. ದೇಶಕ್ಕೆ 10 ರಲ್ಲಿ 2.94 ರ ನಿಧಾನ ಟ್ರಾಫಿಕ್ ಸ್ಕೋರ್, 7 ರಲ್ಲಿ 5.5 ರ ರಸ್ತೆ ಗುಣಮಟ್ಟದ ಸ್ಕೋರ್ ಮತ್ತು ಸರಾಸರಿ ದಟ್ಟಣೆಯ ಮಟ್ಟವು ಕೇವಲ ಶೇ. 17 ಎಂದು ನಿಗದಿಪಡಿಸಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಮಲೇಷ್ಯಾ ವಿಶ್ವದ ವೇಗದ ದೇಶಗಳ ಪಟ್ಟಿಯಲ್ಲಿ ಯುಎಸ್ಎ ನಂತರದ ಸ್ಥಾನದಲ್ಲಿದೆ. ಯುಎಇ 2.95 ರ ನಿಧಾನ ಟ್ರಾಫಿಕ್ ಸ್ಕೋರ್ ಮತ್ತು 7 ರಲ್ಲಿ 6 ರಸ್ತೆ ಗುಣಮಟ್ಟದ ಸ್ಕೋರ್ ಅನ್ನು ಹೊಂದಿದೆ. ಮತ್ತೊಂದೆಡೆ, ಮಲೇಷ್ಯಾ 3.63 ರ ನಿಧಾನ ಟ್ರಾಫಿಕ್ ಸ್ಕೋರ್ ಮತ್ತು 7 ರಲ್ಲಿ 5.3 ರಸ್ತೆ ಗುಣಮಟ್ಟದ ಅಂಕವನ್ನು ಹೊಂದಿದೆ.

ಟ್ರಾಫಿಕ್ ಸ್ಕೋರ್ ಹೊಂದಿರುವ ವಿಶ್ವದ ಅತ್ಯಂತ ನಿಧಾನವಾದ ದೇಶಗಳ ಪಟ್ಟಿ ಇಲ್ಲಿದೆ

ಪೆರು – 8.45

ರೊಮೇನಿಯಾ – 7.83

ಇಸ್ರೇಲ್ – 7.35

ಮೆಕ್ಸಿಕೋ – 7.20

ಲಾಟ್ವಿಯಾ – 6.73

ಪೋಲೆಂಡ್ – 6.58

ಬೆಲ್ಜಿಯಂ – 6.55

ಚಿಲಿ – 6.49

ಅರ್ಜೆಂಟೀನಾ – 6.47

ಭಾರತ – 6.46

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read