ನವದೆಹಲಿ: ಭಾರತವು ಈಗ ತಮ್ಮ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಸರಕುಗಳ ಮೇಲೆ ಸುಂಕ ವಿಧಿಸುವ ದೇಶಗಳ ಮೇಲೆ ಪರಸ್ಪರ ಸುಂಕಗಳು ಏಪ್ರಿಲ್ 2 ರಿಂದ ಪ್ರಾರಂಭವಾಗುತ್ತವೆ ಎಂದು ಹೇಳುತ್ತಿದ್ದಂತೆ ಅವರ ಹೇಳಿಕೆ ಬಂದಿದೆ. ಭಾರತವು ಅಂತಿಮವಾಗಿ ಸುಂಕಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಭಾರತ ನಮಗೆ ಭಾರಿ ಸುಂಕಗಳನ್ನು ವಿಧಿಸುತ್ತದೆ. ನೀವು ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ, ಅಂದಹಾಗೆ, ಅವರು ಈಗ ತಮ್ಮ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದರು.
#WATCH | Washington, DC: US President Donald Trump says, “…India charges us massive tariffs. Massive. You can’t even sell anything in India…They have agreed, by the way; they want to cut their tariffs way down now because somebody is finally exposing them for what they have… pic.twitter.com/XwytKPli48
— ANI (@ANI) March 7, 2025