ಲಂಡನ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಯುವಕನೊಬ್ಬ ಪ್ರೇಮ ನಿವೇದನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ತೀವ್ರ ಕುತೂಹಲ ಕೆರಳಿಸಿರುವ ಪಂದ್ಯದ ವೇಳೆ ಗೆಳತಿಗೆ ಪ್ರಪೋಸ್ ಮಾಡಿರೋದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಪಂದ್ಯದ 4 ನೇ ದಿನದಂದು ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ಈ ಘಟನೆ ಸಂಭವಿಸಿದೆ. 444 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ ಆಟವನ್ನು ಪ್ರಾರಂಭಿಸಿದಾಗ, ಸ್ಟ್ಯಾಂಡ್‌ನಲ್ಲಿರುವ ಅಭಿಮಾನಿಯೊಬ್ಬರು ತನ್ನ ಗೆಳತಿಗೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ಪ್ರಪೋಸ್ ಒಪ್ಪಿಕೊಂಡ ಬಳಿಕ ಇಬ್ಬರೂ ಕ್ಯಾಮೆರಾ ನೋಡುತ್ತಾ ಮುತ್ತಿಟ್ಟಿದ್ದಾರೆ.
ಪ್ರೇಮಿಗಳ ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
https://twitter.com/Rspt1503/status/1667530607805739008?ref_src=twsrc%5Etfw%7Ctwcamp%5Etweetembed%7Ctwterm%5E1667530607805739008%7Ctwgr%5Eb26e7df516ca5b4f198429aefcdedbb7b56996e3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fabplive-epaper-dh7e8ed9a840a34a2e9316137468a5ca4c%2Findvsauswtcfinal2023fanproposeshisgirlfriendoncameravideogoesviral-newsid-n508232148