Madras Eye : ರಾಜ್ಯದಲ್ಲಿ ‘ಮದ್ರಾಸ್ ಐ’ ಪ್ರಕರಣ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ ಪ್ರಕರಣ ಹೆಚ್ಚುತ್ತಿದ್ದು, ಮುಂಜಾಗೃತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಹಾಗೂ ರಾಜ್ಯದಲ್ಲಿ ‘ಮದ್ರಾಸ್ ಐ’ ಹೆಚ್ಚಳವಾದ ಹಿನ್ನೆಲೆ ಆರೋಗ್ಯ ಇಲಾಖೆ ಮಾರ್ಗಸೂಚಿ,  ಸಲಹೆ  ಪ್ರಕಟಿಸಿದೆ.

ಮದ್ರಾಸ್ ಐ ರೋಗ ಲಕ್ಷಣಗಳು
1) ಅತಿಯಾದ ಕಣ್ಣೀರು ಬರುವುದು
2) ಕಣ್ಣು ಕೆಂಪಾಗುವುದು
3) ಕಣ್ಣಿನ ಎರಡು ರೆಪ್ಪೆಗಳಲ್ಲಿ ಕೀವು ತುಂಬುವುದು
4) ಕಣ್ಣಿನಲ್ಲಿ ತುರಿಕೆ ಬರುವುದು
5) ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು
6) ಸತತ ಕಣ್ಣು ನೋವು ಬರುವುದು
7) ದೃಷ್ಟಿ ಮಂಜಾಗುವುದು

ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿಯಿಂದಾಗಿ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಬೀರುತ್ತವೆ. ಇದೀಗ ರಾಜ್ಯದಲ್ಲಿ ಮದ್ರಾಸ್ ಐ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮ:
ಸ್ವಚ್ಛತೆ
ಸೋಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕ ಮಾಡಬಾರದು
ಮದ್ರಾಸ್ ಐ ಸೋಂಕಿತ ವ್ಯಕ್ತಿ ಬಳಸುವ ಕರವಸ್ತ್ರ, ಇತರ ವಸ್ತುಗಳನ್ನು ಬಳಸಬಾರದು
ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು
ಸೋಂಕಿತ ವ್ಯಕ್ತಿಗೆ ಜ್ವರ, ಶೀತ, ಕೆಮ್ಮು ಇದ್ದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು
ಸೋಂಕು ತೀವ್ರವಾಗಿದ್ದರೆ ನೇತ್ರತಜ್ಞರನ್ನು ಭೇಟಿಯಾಗಿ

ಈ ರೀತಿ ಮಾಡುವುದು ಉತ್ತಮ:
ಸ್ವಚ್ಚವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಿ
ಸೋಂಕು ಕಂಡುಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಿರಿ
ಸೋಂಕಿತರು ಪೌಷ್ಠಿಕ ಆಹಾರ ಸೇವಿಸಬೇಕು
ಕರವಸ್ತ್ರ, ಇತರ ವಸ್ತ್ರಗಳನ್ನು ಸಂಸ್ಕರಿಸಿ ಬಳಸಿ

ಏನು ಮಾಡಬಾರದು ?
ಸೋಂಕಿತ ವ್ಯಕ್ತಿಯ ಸನಿಹದಿಂದ ದೂರವಿರಿ
ಸೋಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನ ಮುಟ್ಟಬೇಡಿ
ಕೈಗಳಿಂದ ಪದೇ ಪದೇ ಕಣ್ಣುಗಳನ್ನ ಮುಟ್ಟಬೇಡಿ
ಸ್ವಯಂ ಚಿಕಿತ್ಸಾ ವಿಧಾನಗಳನ್ನ ಮಾಡಬಾರದು

ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ
ಸ್ವಯಂಚಿಕಿತ್ಸಾ ವಿಧಾನಗಾನ್ನು ಅನುಸರಿಸಬೇಡಿ
ಸೋಂಕಿತ ವ್ಯಕ್ತಿ ಬಳಸುವ ವಸ್ತು ಮುಟ್ಟಬೇಡಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read