ಚಳಿಗಾಲದಲ್ಲಿ ಫಿಟ್ ನೆಸ್ ಕಾಪಾಡಿಕೊಳ್ಳಲು ಡಯಟ್ ನಲ್ಲಿ ಇದನ್ನು ಅಳವಡಿಸಿಕೊಳ್ಳಿ

ಚಳಿಗಾಲ ಶುರುವಾಗಿದೆ. ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆಯ ಜೊತೆಗೆ ಆರೋಗ್ಯದ ಕಡೆಗೂ ಲಕ್ಷ್ಯವಹಿಸಬೇಕು. ಅದರಲ್ಲೂ ಫಿಟ್ ನೆಸ್ ಕಾಪಾಡಿಕೊಳ್ಳಲು ಡಯಟ್ ಮೊರೆ ಹೋದವರಿಗಂತೂ ಯಾವ ರೀತಿಯ ಆಹಾರವನ್ನು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂದು ಗೊಂದಲವುಂಟಾಗುತ್ತದೆ.

ಚಳಿಗಾಲದಲ್ಲಿ ಈ ಕೆಳಗಿನ ಕೆಲವು ಆಹಾರವನ್ನು ಸೇವಿಸಿದಲ್ಲಿ ಅವು ಶರೀರವನ್ನು ಬೆಚ್ಚಗಿಡುವುದಲ್ಲದೇ, ಸೌಂದರ್ಯವನ್ನು ಕಾಪಾಡಿ ಆರೋಗ್ಯವನ್ನೂ ಚೆನ್ನಾಗಿಡುತ್ತವೆ.

ಗಸಗಸೆ ಬೀಜ: ಗಸಗಸೆಬೀಜ ತುಂಬ ಪೌಷ್ಠಿಕ ಆಹಾರವಾಗಿದೆ. ಇದು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಇದನ್ನು ಖೀರ್ ರೂಪದಲ್ಲಿ ಅಥವಾ ಹಲ್ವಾ ತಯಾರಿಸಿ ಸೇವಿಸಬಹುದು. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಅಕ್ರೊಟ್: ಅಕ್ರೊಟ್ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಇದರಲ್ಲಿ ಫೈಬರ್, ವಿಟಮಿನ್ ಮತ್ತು ಪ್ರೊಟೀನ್ ಇರುವುದರಿಂದ ಇದನ್ನು  ಡಯಟ್ ನಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.

ಎಳ್ಳು ಬೆಲ್ಲದ ಉಂಡೆ: ಬೆಲ್ಲದಲ್ಲಿ ಕಬ್ಬಿಣಾಂಶ ಮತ್ತು ರಂಜಕ ಇರುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಮ್ ಮತ್ತು ಫ್ಯಾಟ್ ಇರುತ್ತದೆ. ಇದು ದೇಹದ ಉಷ್ಣತೆಯನ್ನು ಕೂಡ ಕಾಪಾಡುತ್ತದೆ.

ಹಾಲು: ಚಳಿಗಾಲ ಆರಂಭವಾಗುತ್ತಿದ್ದಂತೆ ಕೇಸರಿ ಹಾಲು, ಅರಿಶಿನದ ಹಾಲು ಅಥವಾ ಖರ್ಜೂರದ ಹಾಲನ್ನು ಡಯಟ್ ನಲ್ಲಿ ಅಳವಡಿಸಿಕೊಂಡಲ್ಲಿ ಇವು ಶೀತ, ಕೆಮ್ಮು ಮುಂತಾದವುಗಳಿಂದ ರಕ್ಷಣೆ ಒದಗಿಸುತ್ತವೆ. ದೇಹದ ಉಷ್ಣತೆಯನ್ನು ಕೂಡ ಹೆಚ್ಚಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read