ನೀವು ಯಾವ ಆ್ಯಂಗಲ್ ನಲ್ಲಿ ‘ಸ್ಟ್ರಾಂಗ್ ಸಿಎಂ’..? : ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

ಬೆಂಗಳೂರು : ನೀವು ಯಾವ ಸೀಮೆ ‘ಸ್ಟ್ರಾಂಗ್ ಸಿಎಂ’ ಬಿಡ್ರೀ, ನೀವು ಯಾವ ದೃಷ್ಟಿಕೋನದಿಂದ ಸ್ಟ್ರಾಂಗ್ ಸಿಎಂ..? ಎಂದು ಟ್ವೀಟ್ ನಲ್ಲಿ ಬಿಜೆಪಿ ಸಿಎಂ ಸಿದ್ದರಾಮಯ್ಯ ಕಾಲೆಳೆದಿದೆ.

ಸಿಎಂ ಸಿದ್ದರಾಮಯ್ಯ ಅವರೇ, ನೀವು ಯಾವ ದೃಷ್ಟಿಕೋನದಿಂದ ಸ್ಟ್ರಾಂಗ್ ಸಿಎಂ..?? ಪ್ರಮಾಣವಚನ ಸ್ವೀಕರಿಸಿದ ತಿಂಗಳೊಳಗೆ ಶಾಸಕನಿಂದ ನಿಮ್ಮ ಆಡಳಿತದ ವಿರುದ್ಧ ಬಹಿರಂಗ ಪತ್ರ. ಮುಖ್ಯಮಂತ್ರಿಯಾಗಿ ಎರಡು ತಿಂಗಳು ತುಂಬುವ ಮುನ್ನವೇ ನಿಮ್ಮ ಕುರ್ಚಿಯ ವ್ಯಾಲಿಡಿಟಿ ಕೇವಲ ಚುನಾವಣೆವರೆಗೂ ಮಾತ್ರ ಎಂಬುದು ನಿಮ್ಮ ಶಾಸಕರಿಂದಲೇ ಬಹಿರಂಗ. ಬಿಡಿಗಾಸು ಅನುದಾನ ಬರುತ್ತಿಲ್ಲವೆಂದು ಶಾಸಕ-ಸಚಿವರುಗಳಿಂದ ಪ್ರತಿನಿತ್ಯ ನಿಮಗೆ ಬೈಗುಳದ ಮಂಗಳಾರತಿ.

ತಾನು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲವೆಂದು ನಿಮ್ಮ ಪುತ್ರ ರತ್ನನೇ ನಿಮಗೆ “ಹಲೋ ಅಪ್ಪಾ” ಎಂದು ಆವಾಜ್. ಅಧಿಕಾರ ಸ್ವೀಕರಿಸಿ ಆರು ತಿಂಗಳು ತುಂಬುವ ಮುನ್ನವೇ 692 ರೈತರ ಆತ್ಮಹತ್ಯೆ. ನಿಮ್ಮ ಅಮಾಯಕ ಬ್ರದರ್ಸ್‌ಗಳಿಂದ ಎಲ್ಲೆಂದರಲ್ಲಿ ಗಲಭೆ, ಬಾಂಬ್ ಬ್ಲಾಸ್ಟ್. ಮಹಿಳೆಯರ ಮೇಲೆ ಹಾಡುಹಗಲೇ ಹಲ್ಲೆ, ಗ್ಯಾಂಗ್ ರೇಪ್. ಅಧಿಕಾರಕ್ಕೆ ಬಂದು ಎಂಟು ತಿಂಗಳು ತುಂಬುವ ಒಳಗೆ ಕರ್ನಾಟಕಕ್ಕೆ ಅತಿ ಹೆಚ್ಚು ಸಾಲ ಮಾಡಿರುವ ರಾಜ್ಯ ಎಂಬ ಕಳಂಕ. ಈಗ ಹೇಳಿ ಇಷ್ಟೆಲ್ಲಾ ಅಪಭ್ರಂಶಗಳ ನಡುವೆಯೂ ನಿಮ್ಮನ್ನು ನೀವು “ಸ್ಟ್ರಾಂಗ್ ಸಿಎಂ” ಎಂದು ಕರೆದುಕೊಂಡರೆ ಅದು ಸ್ವಕುಚಮರ್ಧನವೆ ಹೊರತು ಬೇರೆನೂ ಅಲ್ಲ! ಬಿಜೆಪಿ ಟ್ವೀಟ್ ಮಾಡಿದೆ.

https://twitter.com/BJP4Karnataka/status/1770278933306724791

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read